ಬ್ಲೂಂಬರ್ಗ್, ಫೆ.3- ಓಮಿಕ್ರಾನ್‍ನ ಉಪ ರೂಪಾಂತರಿ ಬಿಎ.2 ಸೋಂಕು ಮತ್ತಷ್ಟು ವೇಗವಾಗಿ ಹರಡಿ ಮತ್ತೊಂದು ಅಲೆಯ ಮೂಲಕ ಜನರನ್ನು ಕಾಡುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದ ಹಿರಿಯ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.ನವೆಂಬರ್‍ನಲ್ಲಿ ಕಾಣಿಸಿಕೊಂಡ ಮೂಲ ಓಮಿಕ್ರಾನ್ ಕಣಕ್ಕಿಂತಲೂ, ಹೊಸದಾಗಿ ಪತ್ತೆಯಾದ ಉಪ ರೂಪಾಂತರಿ ಸೋಂಕು ಹೆಚ್ಚು ವೇಗವಾಗಿ ಹರಡಲಿದೆ ಎಂಬುದು ಅಧ್ಯಯನಗಳಿಂದ ಸ್ಪಷ್ಟವಾಗಿದೆ.
ಸಾಮಾನ್ಯವಾಗಿ ಒಮ್ಮೆ ಕೊರೊನಾ ಸೋಂಕು ತಗುಲಿ ಚೇತರಿಕೆ ಕಂಡ ಬಳಿಕ ದೇಹದಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಾಗುತ್ತದೆ. ಆದರೆ ಓಮಿಕ್ರಾನ್ ಮತ್ತು ಅದರ ಉಪ ರೂಪಾಂತರಿ ಎರಡೂ ಸೋಂಕುಗಳು ಒಂದಕ್ಕೊಂದು ನಿಗ್ರಹಿಸುವ ಪ್ರತಿಕಾಯ ಶಕ್ತಿಯನ್ನು ಸೃಷ್ಟಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎರಡು ಸೋಂಕುಗಳು ಸೌಮ್ಯ ಲಕ್ಷಣಗಳನ್ನು ಹೊಂದಿರಲಿವೆ. ಡೆನ್ಮಾರ್ಕ್ ಮತ್ತು ಇಂಗ್ಲೆಂಡ್‍ನಲ್ಲಿ ಕಂಡು ಬಂದ ಸೋಂಕುಗಳು ಗಂಭೀರ ಪರಿಣಾಮ ಉಂಟು ಮಾಡಿದ ಉದಾಹರಣೆ ಇಲ್ಲ. ಹಾಗೆಂದು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಓಮಿಕ್ರಾನ್ ಸೋಂಕು ಬಹುಶಃ ಒಂಟೆಯ ಮಾದರಿಯಲ್ಲಿ ಕೊನೆಯಾಗಬಹುದು. ಸದ್ಯಕ್ಕೆ ಕೊರೊನಾ ಮತ್ತೊಂದು ಉಬ್ಬಳಿಕೆಯನ್ನು ಹೊಂದಿದೆ ಎಂದು ಜೈವಿಕ ವಿಜ್ಞಾನದ ಪ್ರಾಧ್ಯಾಪಕ ಟುಲಿಯೋ ಡೆ ಒಲಿವೇರಿಯಾ ತಿಳಿಸಿದ್ದಾರೆ.
ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುವ ಓಮಿಕ್ರಾನ್ ಈವರೆಗೂ ಹೆಚ್ಚು ಅಪಾಯ ಮಾಡಿಲ್ಲ. ದಕ್ಷಿಣಾ ಆಫ್ರಿಕಾ ಸೇರಿ ಹಲವು ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮಂಗಳವಾರ 3,085 ಪ್ರಕರಣಗಳು ಪತ್ತೆಯಾಗುವ ಮೂಲಕ ಜನವರಿ 15ರಿಂದ ಒಟ್ಟು 27 ಸಾವಿರ ಪ್ರಕರಣಗಳು ಕಂಡು ಬಂದಿವೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
