ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಾ.ಮಾ.ಹರೀಶ್ ನೂತನ ಅಧ್ಯಕ್ಷ

Spread the love

ಬೆಂಗಳೂರು.ಮೇ 29- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಬಾ.ಮಾ.ಹರೀಶ್ ಜಯ ಗಳಿಸಿದ್ದಾರೆ
ಬಾ.ಮಾ.ಹರೀಶ್ 781 ಮತ ಪಡೆದರೆ, ಪ್ರತಿಸ್ರ್ಪಧಿ ಸಾ.ರಾ. ಗೋವಿಂದು 378 ಮತವನ್ನು ಗಳಿಸಿದರು. ಸುಮಾರು 403 ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಹರೀಶ್ ಆಯ್ಕೆಗೊಂಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ನಿನ್ನೆ ಚುನಾವಣೆ ನಡೆದಿದ್ದು, ಸ್ರ್ಪಧಿಗಳಲ್ಲಿ ಭಾರಿ ಪೈಪೋಟಿ ಎದುರಾಗಿತ್ತು. ಈ ಬಾರಿ ನಿರ್ಮಾಪಕರ ವಲಯದಿಂದ ಅಧ್ಯಕ್ಷ ಸ್ಥಾನ ನಡೆದಿದ್ದು , ಬಾ.ಮಾ. ಹರೀಶ್ ತಮ್ಮ ಪ್ರತಿಸ್ರ್ಪಧಿ
ಸಾ.ರಾ.ಗೋವಿ0ದು ವಿರುದ್ಧ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಇನ್ನೂ ನಿರ್ಮಾಪಕರ ವಲಯದ ಉಪಾಧ್ಯಕ್ಷರಾಗಿ ಜೈಜಗದೀಶ್, ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜನ್ ಎಂ.ಕೆ. ಹಾಗೂ ಖಜÁಂಚಿಯಾಗಿ ಟಿ.ಪಿ.ಸಿದ್ದರಾಜು ಭಾರೀ ಅಂತರದಿಂದ ಜಯಗಳಿಸಿದ್ದಾರೆ.
ಈ ಚುನಾವಣೆಯಲ್ಲಿ 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶಕರು ತಮ್ಮ ಹಕ್ಕು ಚಲಾಯಿಸಿದರು.

Facebook Comments