2023ರಲ್ಲಿ ನಡೆಯಲಿವೆಯಂತೆ ಘನಘೋರ ಕೃತ್ಯಗಳು..!

Social Share

ನವದೆಹಲಿ,ಡಿ.10- ಹೊಸ ವರ್ಷಾಚರಣೆಗೆ ಇಡಿ ವಿಶ್ವ ಸನ್ನದ್ದರಾಗುತ್ತಿರುವ ಸಂದರ್ಭದಲ್ಲೇ ವಿಶ್ವಪ್ರಸಿದ್ಧ ಬಲ್ಗೇರಿಯನ್ ಭವಿಷ್ಯಕಾರ ಬಾಬಾ ವಂಗಾ ಅವರು 2023ರಲ್ಲಿ ಘನ ಘೋರ ಕೃತ್ಯಗಳು ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಬಲ್ಗೇರಿಯನ್ ಮೂಲದ ಬಾಬಾ ವಂಗಾ ತನ್ನ ಅನುಯಾಯಿಗಳ ಬಳಿ 5079ನೇ ಇಸವಿಯವರೆಗೆ ಭೂಮಿ ಏನೆಲ್ಲೇ ನಡೆಯಬಹುದು ಎಂಬ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅಮೆರಿಕಾದ ಅವಳಿ ಗೋಪುರಗಳ ಮೇಲೆ ಉಗ್ರರು ನಡೆಸಿದ ದಾಳಿ ಸೇರಿದಂತೆ ಡೊನಾಲ್ಡ ಟ್ರಂಪ್ ಎಂಬುವರು ಅಮೆರಿಕಾ ಪ್ರಧಾನಿಯಾಗುತ್ತಾರೆ ಎಂದು ಬಾಬಾ ವಂಗಾ ನುಡಿದಿದ್ದ ಭವಿಷ್ಯ ನಿಜವಾಗಿತ್ತು ಎನ್ನುವುದು ಕಾಕತಾಳಿಯವಾಗಿದೆ.

ದೃಷ್ಟಿಹೀನರಾಗಿದ್ದ ಬಾಬಾ ವಂಗಾ ಅವರು ಎರಡನೇ ಮಹಾಯುದ್ಧ ನಡೆದ ಕಾಲದಿಂದ 1996ರವರೆಗೆ ಜೀವಿಸಿದ್ದರು. ಆದರೆ, ಅವರು ಬರೆದಿರುವ ಭವಿಷ್ಯವಾಣಿ ಇಂದಿಗೂ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

ಪಂಜಾಬ್‍ನ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ್ ಗ್ರೇನೆಡ್ ದಾಳಿ

ಅವರು ಬರೆದ ಭವಿಷ್ಯವಾಣಿಯಂತೆ 2023ರಲ್ಲಿ ಸೌರ ಚಂಡಮಾರುತ ಸಂಭವಿಸಲಿದೆಯಂತೆ. ಸೂರ್ಯನಿಂದ ಹೊರಹೊಮ್ಮುವ ಶಕ್ತಿಯ ಸ್ಪೋಟಗಳಿಂದ ಶತಕೋಟಿ ಅಣುಬಾಂಬ್‍ಗಳಿಗಿಂತ ಶಕ್ತಿಯುತವಾದ ಅನೇಕ ರೀತಿಯ ಅಪಾಯಕಾರಿ ವಿಕಿರಣಗಳು ಭೂಮಿಗೆ ಅಪ್ಪಳಿಸಲಿವೆಯಂತೆ.

ಇದರ ಜೊತೆಗೆ ಅನ್ಯಗ್ರಹ ಜೀವಿಗಳಾದ ಏಲಿಯನ್‍ಗಳು ಭೂಮಿಗೆ ಬರಬಹುದು ಇದರ ಪರಿಣಾಮ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳಲಿದ್ದಾರೆ. ಮಾತ್ರವಲ್ಲ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2023 ರಲ್ಲಿ ಪ್ರಯೋಗಾಲಯಗಳಲ್ಲಿ ಮಾನವ ಶಿಶುಗಳನ್ನು ಬೆಳೆಸಬಹುದು.

ವಿಜ್ಞಾನದ ನಿರಂತರ ಪ್ರಗತಿಯಿಂದಾಗಿ, ಪ್ರಯೋಗಾಲಯದಲ್ಲಿ ಶಿಶುಗಳು ಹುಟ್ಟುವ ಪರಿಕಲ್ಪನೆಯು ಬಾಬಾ ವಂಗಾ ಅವರ ಭವಿಷ್ಯವಾಣಿಯಲ್ಲಿದೆ. ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿ ಮುಂದಿನ ವರ್ಷದಿಂದ ತನ್ನ ಕಕ್ಷೆ ಬದಲಿಸಬಹುದು. ವೃತ್ತಾಕಾರದ ಬದಲಿಗೆ ಅಂಡಾಕಾರದಲ್ಲಿ ಪ್ರಯಾಣ ಮಾಡುವ ಸಾಧ್ಯತೆ ಇರುವುದರಿಂದ ಇತರ ಗ್ರಹಗಳ ಗುರುತ್ವಾಕರ್ಷಣೆ ಪ್ರಭಾವಕ್ಕೆ ಒಳಗಾಗಲಿದೆ. ಭೂ ಕಕ್ಷೆ ಬದಲಾವಣೆಯಾದರೆ ಅದರ ಅಪಾಯ ಊಹಿಸಲು ಸಾಧ್ಯವಿಲ್ಲ ಎಂದು ಬಾಬಾ ವಂಗಾ ಎಚ್ಚರಿಕೆ ನೀಡಿದ್ದರಂತೆ.

ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡು ತತ್ತರ

ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ 2023 ರಲ್ಲಿ, ವಿಶ್ವದ ಶ್ರೀಮಂತ ರಾಷ್ಟ್ರವೊಂದ ಮಾನವರ ಮೇಲೆ ಜೈವಿಕ ಶಸ್ತ್ರಾಸ್ತ್ರ ಪ್ರಯೋಗ ಮಾಡಬಹುದು. ಇದು ಸಾವಿರಾರು ಮಂದಿ ಸಾವುಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಬ್ರಿಟನ್ ರಾಜಕುಮಾರಿ ಡಯಾನಾ ಸಾವು, ಅಮೆರಿಕದ ಮೇಲೆ 9/11 ದಾಳಿ, ಬರಾಕ್ ಒಬಾಮಾ ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಕುರಿತಾದ ಬಾಬಾನ ಭವಿಷ್ಯಗಳು ನಿಜವಾಗಿದವು.

ಇಷ್ಟೆಲ್ಲಾ ಭಯಾನಕ ಭವಿಷ್ಯ ನುಡಿದಿದ್ದ ಬಾಬಾನ ಕೆಲವು ಭವಿಷ್ಯಗಳು ನಿಜವಾಗಿರಲಿಲ್ಲ ಎಂಬುದು ಕೆಲ ಸಂದರ್ಭಗಳಲ್ಲಿ ಸಾಬೀತಾಗಿಲ್ಲ. ಹೀಗಾಗಿ ಜನ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿಜೀವಿಗಳು ಸಲಹೆ ನೀಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ಯುವತಿ ಅಪಹರಿಸಿದ ನೂರಕ್ಕೂ ಹೆಚ್ಚು ಯುವಕರು

2016 ರಲ್ಲಿ ಯುರೋಪ್‍ನಲ್ಲಿ ಒಂದು ದೊಡ್ಡ ಯುದ್ಧ ನಡೆಯಲಿದೆ, ಅದು ಇಡೀ ಖಂಡವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ ಅದೇ ರೀತಿ 2010ರಿಂದ 2014ರ ವರೆಗೆ ಜಗತ್ತಿನಲ್ಲಿ ಭೀಕರ ಪರಮಾಣು ಯುದ್ಧ ನಡೆಯಲಿದ್ದು, ಇದರಿಂದ ಜಗತ್ತಿನ ಬಹುಭಾಗ ನಾಶವಾಗಲಿದೆ ಎಂಬ ಅವರ ಭವಿಷ್ಯವಾಣಿ ನಿಜವಾಗಿರಲಿಲ್ಲ.

Baba Vanga, 2023 predictions, Solar storm, Lab babies,

Articles You Might Like

Share This Article