ಬೆಂಗಳೂರು,ಫೆ.17- ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿರುವವರಿಗಾಗಿ ಐಟಿಐಗಳಲ್ಲಿ 3 ತಿಂಗಳ ಅವಯ ವೃತ್ತಿಪರ ಸರ್ಟಿಫಿಕೇಟ್ ಕೋರ್ಸ್ ಮಾಡಲು ಅನುಕೂಲವಾಗುವಂತೆ ಬದುಕುವ ದಾರಿ ಎಂಬ ಹೊಸ ಯೋಜನೆ ಆರಂಭಿಸಲು ನಿರ್ಧರಿಸಲಾಗಿದೆ.
ಬದುಕುವ ದಾರಿ ಯೋಜನೆಯಡಿ ಐಟಿಐಗಳಲ್ಲಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ.ಗಳ ಶಿಷ್ಯವೇತನ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ 3 ತಿಂಗಳಿಗೆ 1500 ರೂ.ಗಳ ಶಿಶಿಕ್ಷು ಭತ್ಯೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಪದವಿ ಶಿಕ್ಷಣ ಮುಗಿಸಿದ ಮೂರು ವರ್ಷಗಳ ನಂತರವೂ ಉದ್ಯೋಗ ದೊರೆಯದ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತೆ ಪೊ್ರೀತ್ಸಾಹಿಸಲು ಯುವ ಸ್ನೇಹಿ ಎಂಬ ಹೊಸ ಯೋಜನೆಯಡಿ ತಲಾ 2ಸಾವಿರ ರೂ.ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲು ಕ್ರಮಕೈಗೊಳ್ಳಲಾಗಿದೆ.
ಕಂಠೀರವ ಕ್ರೀಡಾಂಗಣ, ಮಂಡ್ಯ ಮತ್ತು ಉಡುಪಿ ಕ್ರೀಡಾಂಗಣಗಳಲ್ಲಿ ಸುಸಜ್ಜಿತ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ.
ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸುಸಜ್ಜಿತ ಕ್ರೀಡಾ ಅಂಕಣ ನಿರ್ಮಿಸಲು 5 ಕೋಟಿ ಅನುದಾನ ನೀಡುವುದು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ.ಗಳ ಪೊ್ರೀತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.
ರಾಜ್ಯದ ಯುವ ಪ್ರತಿಭೆಗಳನ್ನು ಪೊ್ರೀತ್ಸಾಹಿಸಲು ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸಾಧನೆಗೈದ ಐವರಿಗೆ ಪ್ರಸಕ್ತ ಸಾಲಿನಿಂದ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ನೀಡುವುದು ಹಾಗೂ ಒಲಂಪಿಕ್ಸ್ ಮತ್ತಿತರ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ನೀಡಲು ಹಾಗೂ ಸಲಕರಣೆ ಪಡೆಯಲು 50 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್ ಕನಸಿನ ಯೋಜನಾ ನಿ ಸ್ಥಾಪನೆ ಮಾಡಲು ಸಮ್ಮತಿಸಲಾಗಿದೆ.
#BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023, #BadukuvaDariScheme,