ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಬೆಳ್ಳುಬ್ಬಿ ಸಹೋದರನ ಮಗ ಸೇರಿ ಇಬ್ಬರು ಸ್ಥಳದಲ್ಲೇ ಸಾವು

Social Share

ಬಾಗಲಕೋಟೆ, ಅ.6- ನಗರದ ಹೊರ ವಲಯದಲ್ಲಿ ಬೈಕ್ ಮತ್ತು ಕ್ಯಾಂಟರ್ ಟವರಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಸಹೋದರನ ಮಗ ಸೇರಿದಂತೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಜಯಪುರ ಜಿಲ್ಲೆಯ ಕೋಲ್ದಾರದ ಸಚಿನ್ ಮಲ್ಲಿಕಾರ್ಜುನ ಬೆಳ್ಳುಬ್ಬಿ(28) ಹಾಗೂ ಕೋಲ್ದಾರ ತಾಲೂಕಿನ ಕುಬಕಡ್ಡಿ ಗ್ರಾಮದ ಪರಶುರಾಮ ಸಂಗಪ್ಪ ತೆಲಗಿ(26) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಗಳು.

ಈ ಇಬ್ಬರೂ ದೇವಿ ದರ್ಶನ ಪಡೆದು ಯಲ್ಲಮ್ಮನ ಗುಡ್ಡದಿಂದ ವಾಪಸ್ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಗದ್ದನಕೇರಿ ಕ್ರಾಸ್ ಬಳಿಯ ಯಡಹಳ್ಳಿಕ್ರಾಸ್‍ನಲ್ಲಿ ಬೀಳಗಿ ಕಡೆಯಿಂದ ಕಲಾದಗಿ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಟವರಸ್ ನಡುವೆ ರಸ್ತೆ ಅಪಘಾತ ಡಿಕ್ಕಿ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಬಿ.ಎಂ.ಸೂರಿ ಹಾಗೂ ಕಲಾದಗಿ ಪೊಲೀಸ್ ಠಾಣೆ ಪಿಎಸ್‍ಐ ಆರ್. ಎಂ. ಸಂಕನಾಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Articles You Might Like

Share This Article