ಹಿಂದೂ ದೇವರುಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದವನಿಗೆ ಬಿತ್ತು ಗೂಸಾ

Social Share

ಹೈದ್ರಾಬಾದ್,ಫೆ.28-ಹಿಂದೂ ದೇವರುಗಳ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪಿಯೊಬ್ಬನನ್ನು ಪೊಲೀಸ್ ವ್ಯಾನಿನಲ್ಲಿ ಹಿಗ್ಗಾಮುಗ್ಗಾ ಥಲಿಸಿರುವ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಹನುಮಕೊಂಡದ ಕಾನೂನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಿಂದೂ ವಿರೋಧಿ ಭೈರಿ ನರೇಶ್ ಎಂಬಾತನ ಮೇಲೆ ಬಲಪಂಥಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.

ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ನರೇಶ್ ತನ್ನ ಮೇಲೆ ಕುಪಿತಗೊಂಡ ಕೆಲವರು ದಾಳಿ ನಡೆಸಬಹುದು ಎಂಬ ಭೀತಿಯಿಂದ ಕಾರ್ಯಕ್ರಮಕ್ಕೆ ಪೊಲೀಸರನ್ನು ಕರೆಯಿಸಿಕೊಂಡಿದ್ದ ಪೊಲೀಸರ ಭದ್ರತೆಯಲ್ಲಿ ಪೊಲೀಸ್ ವ್ಯಾನ್‍ಗೆ ಬಂದ ನರೇಶನನ್ನು ಹಿಂಬಾಲಿಸಿಕೊಂಡು ಒಂದು ಗುಂಪು ಬಂದಿತ್ತು.

ದೇಶದ ಸಮಗ್ರ ಅಭಿವೃದ್ಧಿಗೆ ತಂತ್ರಜ್ಞಾನ ನೆರವು ನೀಡಲಿದೆ; ಮೋದಿ

ನರೇಶ್ ಪೊಲೀಸ್ ವ್ಯಾನ್ ಹತ್ತಿದರೂ ಬೀಡದ ಗುಂಪು ವ್ಯಾನಿನೊಳಗೆ ನುಗ್ಗಿ ಪೊಲೀಸರೆದುರೇ ಮನಬಂದಂತೆ ಥಳಿಸಿದೆ. ತಡೆಯಲು ಬಂದ ಪೊಲೀಸರನ್ನು ತಳ್ಳಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಲಪಂಥಿಯ ಗುಂಪಿನವರು ಈ ದಾಳಿ ನಡೆಸಿದ್ದಾರೆ ಅವರೆಲ್ಲರನ್ನೂ ಬಂಧಿಸಲಾಗಿದೆ ಎಂದು ವಾರಂಗಲ್ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Bairi Naresh, assaulted, Hindutva, workers, Hanamkonda,

Articles You Might Like

Share This Article