ಬೆಂಗಳೂರು,ಫೆ.25- ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಧಿಸಿದ್ದ ಕಫ್ರ್ಯೂ ನಾಳೆ ಬೆಳಗ್ಗೆ ತೆರವಾಗುವ ಹಿನ್ನೆಲೆ ಯಲ್ಲಿ ಶಾಲಾ-ಕಾಲೇಜುಗಳು, ವ್ಯಾಪಾರ ವಹಿವಾಟು ಎಂದಿನಂತೆ ಆರಂಭ ವಾಗಲಿದೆ.
ಬಜರಂಗದಳದ ಕಾರ್ಯಕರ್ತ ಹಿಂದು ಹರ್ಷ ಹತ್ಯೆ ಖಂಡಿಸಿ ಶವಯಾತ್ರೆ ಸಂದರ್ಭದಲ್ಲಿ ಹಿಂಸಾಚಾರ ಘಟನೆಗಳು ನಡೆದಿದ್ದು, ಕಫ್ರ್ಯೂ ವಿಧಿಸಲಾಗಿತ್ತು. ನಾಳೆ ಕಫ್ರ್ಯೂ ತೆರವಾಗಲಿದ್ದು, ಶಾಲಾ- ಕಾಲೇಜುಗಳು ಪ್ರಾರಂಭವಾಗಲಿದ್ದು, ವ್ಯಾಪಾರ ವಹಿವಾಟಿಗೂ ಅನುವು ಮಾಡಿಕೊಡಲಾಗಿತ್ತಿದೆ.
ಆದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ನಿಯೋಜಿಸಿ ಬಂದೋಬಸ್ತ್ ಮುಂದುವರೆಸಲಾಗುವುದು. ಹತ್ಯೆಯಾದ ಹರ್ಷ ನಿವಾಸಕ್ಕೆ ಬಿಜೆಪಿ ಮುಖಂಡರು, ಹಿಂದುಪರ ಸಂಘಟನೆಗಳ ಮುಖಂಡರು ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದಾರೆ. ಅವರ ಕುಟುಂಬಕ್ಕೆ ಭಾರಿ ಪ್ರಮಾಣದ ಪರಿಹಾರ ಧನ ಹರಿದು ಬರುತ್ತಿದೆ. ಈ ನಡುವೆ ಹರ್ಷ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟರ್‍ಗಳು ಶಿವಮೊಗ್ಗದಾದ್ಯಂತ ಕಂಡು ಬರುತ್ತಿದೆ.
ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಹರ್ಷನ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಕೊಟ್ಟು ಸೂಕ್ತ ಗೌರವ ಸಲ್ಲಿಸಬೇಕೆಂಬ ಪೋಸ್ಟರ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಂತಾಪ, ಶ್ರದ್ಧಾಂಜಲಿ, ಸಾಂತ್ವನ, ಹಣದ ಸಹಾಯ ಏನೇ ಇದ್ದರೂ ಜೀವದ ಬೆಲೆ ಎಂಬುದು ತಮ್ಮನನ್ನು ಕಳೆದುಕೊಂಡ ಅಕ್ಕನಿಗೆ ಗೊತ್ತು. ಮಗನನ್ನು ಕಳೆದುಕೊಂಡ ಅಪ್ಪ-ಅಮ್ಮನಿಗೆ ಗೊತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಹರ್ಷನ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂಬ ಅಭಿಯಾನ ಕೇಳಿ ಬಂದಿದೆ.
ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಹರ್ಷನ ಪೋಷಕರಿಗೆ ಎಂಎಲ್‍ಎ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿ. ನಾವು ಅವರನ್ನು ಗೆಲ್ಲಿಸುತ್ತೇವೆ ಎಂಬ vಸ್ಟರ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.
