ಸರ್ಕಾರ – ಕೆಎಂಎಫ್ ನಡುವೆ ಸಮನ್ವಯ ಕೊರತೆ

Social Share

ಬೆಂಗಳೂರು,ನ.15- ನಂದಿನಿ ಹಾಲಿನ ದರ ಹೆಚ್ಚಳ ಕುರಿತಾಗಿ ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಮತ್ತೊಮ್ಮೆ ಬಟಬಯಲಾಗಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಮಧ್ಯಾಹ್ನ ಏಕಾಏಕಿ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‍ಗೆ 3 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದರು.

ಕೆಎಂಎಫ್ ಹೊರಡಿಸಿದ್ದ ಆದೇಶವನ್ನು ಸಂಜೆ ಕಳೆಯುವುದರೊಳಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಿಂಪಡೆಯುವಂತೆ ಸೂಚಿಸಿ ಹಾಲಿನ ದರ ಹೆಚ್ಚಳ ಕುರಿತು ಇದೇ 20ರ ನಂತರ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದು ಕೆಎಂಎಫ್ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇಲ್ಲದಿರುವುದು ಒಂದು ಕಡೆಯಾದರೆ ಜಾರಕಿಹೊಳಿ ಕುಟುಂಬ ಹಾಗೂ ಬಿಜೆಪಿ ನಡುವೆ ನಡೆಯುತ್ತಿರುವ ಶೀತಲ ಸಮರ ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ.

ಚೀನಾದೊಂದಿಗೆ ಯಾವುದೇ ಶೀತಲ ಸಮರ ಇಲ್ಲ : ಬಿಡೆನ್

ಸಾಮಾನ್ಯವಾಗಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಬೇಕಾದರೆ ಕೆಎಂಎಫ್ ಕಡ್ಡಾಯವಾಗಿ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ನಂತರವೇ ದರ ಪರಿಷ್ಕರಣೆ ಮಾಡಬೇಕು. ಅಂತಿಮವಾಗಿ ಮುಖ್ಯಮಂತ್ರಿಗಳು ಸಮ್ಮತಿಸಿದ ಮೇಲೆ ದರ ಪರಿಷ್ಕರಣೆಯಾಗುತ್ತದೆ.

ಬಾಲಚಂದ್ರ ಜಾರಕಿಹೊಳಿಯವರು ಈ ಹಿಂದೆ ಸಿಎಂ ಬಳಿ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಸಿದ್ದರೂ ಅದಕ್ಕೆ ಅವರು ಅನುಮತಿಯನ್ನು ಕೊಟ್ಟಿರಲಿಲ್ಲ. ನಿನ್ನೆ ಏಕಾಏಕಿ 3 ರೂ. ಹೆಚ್ಚಳ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ ಅದೇ ದಿನ ಆದೇಶವನ್ನು ಹಿಂಪಡೆಯುವ ಮೂಲಕ ಕೆಎಂಎಫ್ ನಗೆಪಾಟಲಿಗೆ ಈಡಾಗಿದೆ.

ಕಳೆದ ಒಂದು ವರ್ಷದಿಂದ ಜಾರಕಿಹೊಳಿ ಕುಟುಂಬ ಬಿಜೆಪಿ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಹುತೇಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಹಲವು ಬಾರಿ ಒತ್ತಡ ಹಾಕಿದರೂ ಕೂಡ ಸದ್ಯಕ್ಕೆ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರ ಮೇಲಿನ ಪ್ರಕರಣ ಇತ್ಯರ್ಥವಾಗುವವರೆಗೂ ಸಂಪುಟಕ್ಕೆ ಬೇಡ ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಂತಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಜಿ-20 ಸಮ್ಮೇಳನದಲ್ಲಿ ಮೋದಿ ಪ್ರಸ್ತಾಪ

ಕಡೇ ಪಕ್ಷ ನನ್ನ ಬದಲಿಗೆ ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿಯನ್ನಾದರೂ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಇದಕ್ಕೂ ಕೂಡ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಈ ನಡುವೆ ಬಿಜೆಪಿಯ ಎಲ್ಲ ಸಕ್ರೀಯ ಚಟುವಟಿಕೆಗಳಿಂದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಹಳ್ಳಿ, ಶ್ರೀಮಂತ ಪಾಟೀಲ್ ಸೇರಿದಂತೆ ಮತ್ತಿತರರು ದೂರ ಉಳಿದಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಜನಸಂಕಲ್ಪ ಯಾತ್ರೆಗೂ ಇವರು ಭಾಗಿಯಾಗಿರಲಿಲ್ಲ. ಒಂದು ಮೂಲದ ಪ್ರಕಾರ ಬಿಜೆಪಿಯಿಂದ ಒಂದು ಹೆಜ್ಜೆ ಹೊರಹೋಗಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

ಹೀಗೆ ಸರ್ಕಾರ ಮತ್ತು ಅಧ್ಯಕ್ಷರ ನಡುವಿನ ಗುದ್ದಾಟದಿಂದ ದೇಶದಲ್ಲೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಎಂಎಫ್ ನಲುಗುವಂತಾಗಿದೆ.

Articles You Might Like

Share This Article