12ರಿಂದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯುತ್ಸವ

Social Share

ಬೆಂಗಳೂರು,ಜ.7- ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯುತ್ಸವ ಹಾಗೂ 10ನೇ ವರ್ಷದ ಸಂಸ್ಕರಣಾ ಮಹೋತ್ಸವ ಇದೇ 12ರಿಂದ 18ರವರೆಗೆ ನಡೆಯಲಿದೆ.

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಈ ಮಹೋತ್ಸವದ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರು
ವಹಿಸಲಿದ್ದಾರೆ.

ಜಾರ್ಖಾಂಡ್‍ನಲ್ಲಿ ಮತ್ತೆ ಬುಗಿಲೇದ್ದ ಪರಸ್ನಾಥ್ ಬೆಟ್ಟದ ವಿವಾದ

ಜ.12ರಂದು ರೈತರ ಸಮಾವೇಶ, 13ರಂದು ಹೋಮ, ಹವನದಿ ಧಾರ್ಮಿಕ ಕಾರ್ಯಕ್ರಮ, 14ರಂದು ಹಿರಿಯ ವಿದ್ಯಾರ್ಥಿಗಳ ವೇದಿಕೆ ಸಮಾರಂಭ, 15ರಂದು ಮಕ್ಕಳ ಸಾಹಿತ್ಯ ಸಮ್ಮೇಳನ, 16ರಂದು ಕುವೆಂಪು ಸಾಹಿತ್ಯ ದರ್ಶನ, 17ರಂದು ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ಹಾಗೂ 18ರಂದು ಜಯಂತ್ಯುತ್ಸವ ಮತ್ತು ಭಕ್ತ-ಸಂತ ಸಂಗಮ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

balagangadharanatha swamiji, jayantotsava, adichunchanagiri,

Articles You Might Like

Share This Article