ಜೆಡಿಎಸ್ ಸೇರಿದ ಬಿಜೆಪಿ-ಕಾಂಗ್ರೆಸ್ ಮುಖಂಡರು

Social Share

ಬೀದರ್, ಜ.22- ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಾಂಗಲೇರಾ ಮತ್ತು ಕರಕನಳ್ಳಿ ಗ್ರಾಮಗಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ನಾವೆಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಪಕ್ಷ ಸಂಘಟನೆ, ಬಲವರ್ಧನೆಗಾಗಿ ಶ್ರಮಿಸಬೇಕಾಗಿದೆ ಎಂದರು.

ಜ.23ಕ್ಕೆ ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಮದುವೆ

ಪಕ್ಷದಲ್ಲಿರುವ ಮುಖಂಡರು, ಕಾರ್ಯಕರ್ತರೆಲ್ಲರು ಪಕ್ಷದ ತತ್ವ ಸಿದ್ದಾÁಂತಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರ ಕೈ ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರು ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ದೇವೇಗೌಡರು, ಕುಮಾರಸ್ವಾಮಿರವರು, ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂರವರು ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದು. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಜನತಾ ಜಲದಾರೆಯ ಬಳಿಕ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ನಾವೆಲ್ಲರೂ ತಳಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ನಾವು ಅಕಾರದಲ್ಲಿ ಇದ್ದಾಗ ನೀಡಿದ ಜನಪರ ಕಾರ್ಯಕ್ರಮಗಳು, ಮುಂದಿನ ದಿನಗಳಲ್ಲಿ ಜಾರಿಗೆ ತರಲಿರುವ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

ಬಾಲಕನನ್ನ ಕೊಂದು ತಿಂದು ಚಿರತೆ, ಅರಣ್ಯ ಇಲಾಖೆ ವಿರುದ್ಧಗ್ರಾಮಸ್ಥರ ಆಕ್ರೋಶ

ಈ ಸಂದರ್ಭದಲ್ಲಿ ಮಾರುತಿ ಖಾಶೆಂಪುರ್, ಪ್ರವೀಣ್ ಸಾಗರ್ (ಮುನ್ನಾ ಕೋಟೆ), ಆನಂದ್ ಖಾಶೆಂಪುರ್ ಖಾಶೆಂಪುರೆ, ರಿಚಾರ್ಡ್ ಕೋಟೆ, ಜಾನ್ಸನ್ ದೊಡ್ಡಮನಿ, ಚಾಂಗಲೇರಾದ ಗಣಪತಿ ಹಸರಗುಂಡಗಿ,

ದಿನೇಶ್ ಗಟೈದರ್, ಸುಂದರ್ ಮೇಲ್ಕೇರಿ, ಯೋಹನ್ ದೇವಗೀರಿ, ಶ್ಯಾಮ್ ಗಟೈದರ್, ಅರ್ಜುನ್ ಮೇಲ್ಕೇರಿ, ಹಣುಮಂತ ಮೇಲ್ಕೇರಿ, ಕರಕನಳ್ಳಿಯ ಗೌಸುದ್ದೀನ್ ಮೋಜಾ, ಇಸ್ಮಾಯಿಲ್ ಕಲಾಲï, ಗುಡಸಾಬï, ಸಲಿಂ, ಖಾಜಾಮೀಯಾ, ಬುಡಾನ್ ಸಾಬï, ಅಕ್ಬರ್, ರಾಜಕುಮಾರ, ಸಂಜು, ಸುದರ್ಶನ್ ಸೇರಿದಂತೆ ಅನೇಕರಿದ್ದರು.

Bandeppa Khashempur, BJP, Congress, leaders, join, JDS,

Articles You Might Like

Share This Article