ಬೆಂಗಳೂರಿನಲ್ಲಿ ಮತ್ತೆ ಜಾರಿಗೆ ಬರಲಿದೆ ಹೊಸ ಜಾಹೀರಾತು ನೀತಿ

Social Share

ಬೆಂಗಳೂರು,ಫೆ.7- ನಗರದಲ್ಲಿ ಮತ್ತೆ ಜಾಹೀರಾತು ಮಾಫೀಯಾಗೆ ಮಣೆ ಹಾಕಲಾಗುತ್ತಿದೆ. ಖಾಲಿಯಾಗಿರುವ ಖಜಾನೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಮತ್ತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಹೊಸ ಜಾಹೀರಾತು ನೀತಿ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ.

ಈ ಹಿಂದೆ ಇದ್ದ ಜಾಹೀರಾತು ನೀತಿಗೆ ತಿದ್ದುಪಡಿ ತಂದು ಹೊಸ ಜಾಹೀರಾತು ಬೈಲಾ ಜಾರಿಗೆ ತರಲು ತೀರ್ಮಾನಿಸಲಾಗಿದ್ದು, ಮುಂಬರುವ ಬಜೆಟ್ ಮಂಡನೆ ವೇಳೆ ಹೊಸ ನಿಯಮ ಜಾರಿಗೆ ತರುವ ಸಾಧ್ಯತೆಗಳಿವೆ.

ನಗರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರಲು ತೀರ್ಮಾನಿಸಿರುವುದನ್ನು ಒಪ್ಪಿಕೊಂಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈಗಾಗಲೇ ಸರ್ಕಾರಕ್ಕೆ ಈಬಗ್ಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಶೀಘ್ರದಲ್ಲಿ ಹೊಸ ರೂಪದಲ್ಲಿ ಜಾಹೀರಾತು ಬೈಲಾ ಜಾರಿಗೆ ತರಲು ತೀರ್ಮಾನಿಸಲಾಗಿದ್ದು, ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೆ ನಾಮಕರಣಕ್ಕೆ ಕಿತ್ತಾಟ

ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದ ಕಾರಣದಿಂದ ನ್ಯಾಯಾಲಯ ನಗರದಲ್ಲಿ ಫ್ಲೆಕ್ಸ್, ಬ್ಯಾನರ್‍ಗಳಿಗೆ ನಿಷೇಧ ಹೇರಿತ್ತು. ನಿಷೇಧದ ನಡುವೆಯೂ ಹಲವು ಕಡೆಗಳಲ್ಲಿ ಅನಧಿಕೃತ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿತ್ತು.

ಅಕ್ರಮವಾಗಿ ಹಾಕಲಾದ ಜಾಹೀರಾತುಗಳ ತೆರವಿಗೆ ಪಾಲಿಕೆಯಿಂದಲೇ ಹಣ ಭರಿಸಲಾಗುತ್ತಿದೆ. ಹೀಗಾಗಿ ಎಲ್ಲಾ ಸಮಸ್ಯೆ ನಿವಾರಣೆಗೆ ಹೊಸ ಜಾಹೀರಾತು ನೀತಿ ಜಾರಿಗೆ ತರಲಾಗುತ್ತಿದೆ ಎಂದು ಆಯುಕ್ತರು ಸಮಜಾಯಿಷಿ ನೀಡಿದ್ದಾರೆ.

ನಗರದಲ್ಲಿ ಯಾವ ಯಾವ ಪ್ರದೇಶದಲ್ಲಿ ಅವಕಾಶ ನೀಡಬೇಕು ? ಎಷ್ಟು ದರ ನಿಗದಿ ಮಾಡಬೇಕು. ಸದ್ಯ ಇರೋ ಪಿಪಿಪಿ ಮಾಡೆಲ್ಗೆ ಯಾವ ನೀತಿ ಇರಬೇಕು. ಹೋಲ್ಡಿಂಗ್ ಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರುವುದು. ಬಿಬಿಎಂಪಿಯಿಂದಲೇ ಜಾಹೀರಾತು ಸ್ಥಳ ನಿಗದಿ. ಪ್ರತಿ ಜಾಹೀರಾತು ಹೋರ್ಡಿಂಗ್‍ಗೂ ಪ್ರತ್ಯೇಕ ಆರ್‍ಎಫ್‍ಐಡಿ ಸಂಖ್ಯೆ ನಿಗದಿ. ನಿಗದಿತ ಹೋರ್ಡಿಂಗ್ ಗೆ ಜಿಪಿಎಸ್ ಅಳವಡಿಕೆಗೆ ತೀರ್ಮಾನ ಕೈಗೊಳ್ಳಲಾಗುತ್ತಿದೆ.

ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ

ನಿರ್ದಿಷ್ಟ ಜಾಹೀರಾತು ಫಲಕಕ್ಕೆ ಮಾತ್ರ ಅನುಮತಿಗೆ ತೀರ್ಮಾನ. ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ಅನುಮತಿ. ಬಿಬಿಎಂಪಿಗೆ ಭರಪೂರ ಆದಾಯ ತರುವ ತಾಕತ್ತಿರೋ ಜಾಹೀರಾತುಗಳಿಗಿದೆ. ಆದರೆ, ಕೆಲವು ಮಾಫಿಯಾಗಳಿಂದಾಗಿ ಜಾಹೀರಾತಿನಿಂದ ಪಾಲಿಕೆಗೆ ನಷ್ಟವಾಗುತ್ತಿದೆ.

ಈಹಿಂದೆ ಜಾಹೀರಾತಿನಿಂದ 40 ರಿಂದ 50 ಕೋಟಿ ವಾರ್ಷಿಕ ಆದಾಯ ಹೊಂದಿದ್ದ ಪಾಲಿಕೆ. ಸದ್ಯ ಹೊಸ ನಿಯಮ ಜಾರಿಗೆ ತಂದು 300 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ ಪಾಲಿಕೆ.

ಒತ್ತಡ ಕಾರಣ: ಮುಂಬರುವ ವಿಧಾನಸಭೆ ಚುನಾವಣೆ ಒಳಗೆ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ನಗರದ ಕೆಲ ಶಾಸಕರು ಆಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

Bangalore, BBMP, new advertising, policy,

Articles You Might Like

Share This Article