ಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಾಲಕ

Social Share

ಬೆಂಗಳೂರು.17- ಆಟವಾಡುತ್ತಿದ್ದಾಗ ಮೂರು ವರ್ಷದ ಮಗು ರಾಜಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೊಗಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಬೀರ್ ರಾಜಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ವರ್ತೂರು ಬಳಿ ಇರುವ ಶೋಭ ಗ್ರೀನ್ ಆಪಾರ್ಟ್‍ಮೆಂಟ್‍ನ ಬಳಿಯ ಶೆಡ್‍ವೊಂದರಲ್ಲಿ ಆಹಾರ ವಿತರಿಸುವ ಝುಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‍ರವರ ಪುತ್ರ ಕಬೀರ್ ಹಾಗೂ ಇನ್ನೊಬ್ಬ ಬಾಲಕ ಆಟವಾಡಲು ರಾಜಕಾಲುವೆ ಬಳಿ ಹೋಗಿದ್ದರು.

ನಿನ್ನೆ ಸಂಜೆ ಜೋರು ಮಳೆ ಬಂದ ಸಂದರ್ಭದಲ್ಲಿ ಕಬೀರ್ ರಾಜಕಾಲುವೆಗೆ ಬಿದ್ದಿದ್ದಾನೆ. ಮತ್ತೊಬ್ಬ ಬಾಲಕ ಅಲ್ಲಿಂದ ಓಡಿಬಂದು ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳೀಯರು ಅಲ್ಲಿ ಹುಡುಕಾಟ ನಡೆಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಎರಡು ತಂಡಗಳು ಹಾಗೂ ವರ್ತೂರು ಪೊಲೀಸರು ಇಂದು ಬೆಳಗಿನಿಂದ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಮಗು ಕೊಚ್ಚಿಕೊಂಡು ಎಲ್ಲಿಗೆ ಹೋಗಿರಬಹುದು ಎಂಬುದು ತಿಳಿಯುತ್ತಿಲ್ಲ.

Articles You Might Like

Share This Article