ಬೆಂಗಳೂರು,ಜ.26- ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಇಂದು 21025 ಮಂದಿಗೆ ಕೊರೊನಾ ಕಾಣಿಸಿಕೊಂಡಿರುವುದರಿಂದ ಆತಂಕ ಎದುರಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ಏರಿಕೆ ಪ್ರಮಾಣ ಇಳಿಮುಖದತ್ತ ಮುಖ ಮಾಡಿತ್ತು. ಹೀಗಾಗಿ ನಿನ್ನೆ ಕೇವಲ 15 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.
ಇದೀಗ ಮತ್ತೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೇವಲ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸುಮಾರು ಆರು ಸಾವಿರದಷ್ಟು ಹೆಚ್ಚಳವಾಗಿರುವುದರಿಂದ ನಾಗರೀಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೇವಲ ಸೋಂಕಿನ ಪ್ರಮಾಣದಲ್ಲಿ ಮಾತ್ರ ಏರಿಕೆ ಕಾಣದೆ ಸಾವಿನ ಪ್ರಮಾಣದಲ್ಲೂ ಹೆಚ್ಚಳವಾಗುತ್ತಿರುವುದು ಜನರನ್ನು ಭೀತಿಗೊಳಿಸಿದೆ.
ನಿನ್ನೆಯಿಂದ ಮಹಾಮಾರಿಗೆ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬೊಮ್ಮನಹಳ್ಳಿಯಲ್ಲಿ 2584, ದಾಸರಹಳ್ಳಿಯಲ್ಲಿ 374, ಪೂರ್ವದಲ್ಲಿ 3246, ಮಹದೇವಪುರದಲ್ಲಿ 3715, ಆರ್.ಆರ್.ನಗರದಲ್ಲಿ 1295, ದಕ್ಷಿಣದಲ್ಲಿ 2575, ಪಶ್ಚಿಮದಲ್ಲಿ 1374, ಯಲಹಂಕದಲ್ಲಿ 1536, ಆನೇಕಲ್‍ನಲ್ಲಿ 1261, ಪೂರ್ವ ತಾಲೂಕಿನಲ್ಲಿ 439, ಉತ್ತರ ತಾಲೂಕಿನಲ್ಲಿ 248, ದಕ್ಷಿಣ ತಾಲೂಕಿನಲ್ಲಿ 702 ಹಾಗೂ ಬೆಂಗಳೂರು ಹೊರಗಿನ 1676 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದಾಖಲೆಗಳಲ್ಲಿ ದೃಢಪಟ್ಟಿದೆ.
