ಬೆಂಗಳೂರಿನಲ್ಲಿ ನಿಲ್ಲದ ಮಳೆ ಆವಾಂತರ, 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

Social Share

ಬೆಂಗಳೂರು,ಆ.2- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ನಗರದಲ್ಲಿ ಹಲವಾರು ಆವಾಂತರಗಳನ್ನು ಸೃಷ್ಟಿಸಿತ್ತು.
ಬಿಟ್ಟುಬಿಡದೆ ಸುರಿದ ಮಳೆಗೆ ಹೊರಮಾವು ಸಮೀಪದ ಸಾಯಿ ಲೇಔಟ್ ಅಕ್ಷರಶಃ ಕೆರೆಯಂತಾಗಿತ್ತು. ಇಡೀ ಪ್ರದೇಶ ಕೆರೆಯಂತಾಗಿದ್ದ ಪರಿಣಾಮ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಭಾರೀ ಸಮಸ್ಯೆ ಎದುರಾಗಿತ್ತು.

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಟಿವಿ, ಫ್ರಿಡ್ಜ್ ಸೇರಿದಂತೆ ದಿನನಿತ್ಯ ಬಳಕೆಯ ಆಹಾರ ಸಾಮಾಗ್ರಿಗಳು ನೀರು ಪಾಲಾದವು.
ಕಳೆದ ಬಾರಿ ಸುರಿದ ಮಳೆ ಸಂದರ್ಭದಲ್ಲೂ ಸಾಯಿ ಲೇಔಟ್ ಕೆರೆಯಂತಾಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಎದುರಾಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಬಿಬಿಎಂಪಿಯವರಿಗೆ ಮನವರಿಕೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ. ಸ್ಥಳೀಯ ಶಾಸಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೋದವರು ಇದುವರೆಗೂ ಇತ್ತ ಮುಖ ಹಾಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಧರೆಗುರುಳಿದ ಮರ: ಮೇಖ್ರಿ ವೃತ್ತದ ಸ್ಕೆ ೈವಾಕ್ ಪಕ್ಕದಲ್ಲಿದ್ದ ಭಾರೀ ಗಾತ್ರದ ಮರವೊಂದು ಉರುಳಿಬಿದ್ದಿರುವುದರಿಂದ ಆ ಭಾಗದ ವಾಹನ ಸಂಚಾರಕ್ಕೆ ತೀವ್ರ ಆಡಚಣೆ ಎದುರಾಗಿತ್ತು. ಮರ ಉರುಳಿಬಿದ್ದು ಗಂಟೆಗಳೇ ಕಳೆದರೂ ಬಿಬಿಎಂಪಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿದ ಹಿನ್ನೆಲೆಯಲ್ಲಿ ಏರ್‍ಪೋರ್ಟ್ ಕಡೆ ಸಾಗುತ್ತಿದ್ದ ವಾಹನಗಳು ಅಮೆಗತಿಯಲ್ಲಿ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸರೇ ಉರುಳಿಬಿದ್ದಿದ್ದ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕಾಯಿತು.

ವೃದ್ಧನಿಗೆ ಗಂಭೀರ ಗಾಯ: ನೆಲಮಂಗಲ ಸಮೀಪದ ಹೊನ್ನೇನಹಳ್ಳಿಯಲ್ಲಿ ಮಳೆಯಿಂದ ಮನೆ ಗೊಡೆ ಕುಸಿದುಬಿದ್ದ ಪರಿಣಾಮ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಹನುಮಯ್ಯ ಅವರನ್ನು ದಾಬಸ್‍ಪೇಟೆ ಆಸ್ಪತ್ರೆಗೆ ಸಾಗಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹನುಮಯ್ಯ ಅವರ ಪಕ್ಕದ ಮನೆ ನಿವಾಸಿ ಆಂಜಿನಪ್ಪ ಎಂಬುವರ ಮನೆ ಗೊಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ.

Articles You Might Like

Share This Article