ಬೆಂಗಳೂರು,ಫೆ.15- ಬಹು ನಿರೀಕ್ಷಿತ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ಮಾ. 3, ರಿಂದ ಮಾರ್ಚ್ 10 ರವರೆಗೆ ನಗರದಲ್ಲಿ ನಡೆಯಲಿದೆ. ಕೋವಿಡ್ ಸೋಂಕು ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಯಗೊಳೊಂದಿಗೆ ಸಿನಿಮಾ ಹಬ್ಬ ನಡೆಸಲಾಗುತ್ತಿದೆ ಎಂದು ಚಲನಚಿತ್ರ ಅಕಾಡಮಿ ಅಧ್ಯಕ್ಣೆ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ ಅಸೋಸಿಯೇಷನ್ ಮಾನ್ಯತೆ ಪಡೆದ ನಂತರ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಚಿತ್ರೋತ್ಸವವಾಗಿದೆ ಎಂದರು.
ಜಗತ್ತಿನಲ್ಲಿ ಸುಮಾರು 5000 ಚಲನ ಚಿತ್ರೋತ್ಸವಗಳು ನಡೆಯುತ್ತಿವೆ. ಅವುಗಳ ಪೈಕಿ ಫಿಯಾಫಿ ಮಾನ್ಯತೆ ಪಡೆದಿರುವುದು 46 ಚಿತ್ರೋತ್ಸವಗಳು ಮಾತ್ರ ಈಗ ಬೆಂಗಳೂರು ಚಲನಚಿತ್ರೋತ್ಸವ ಆ ಸಾಲಿಗೆ ಸೇರಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಜಿಕೆವಿಕೆ ಸಭಾಂಗಣದಲ್ಲಿ ಮಾರ್ಚ್ 3 ರಂದು ಸಂಜೆ ನಡೆಯಲಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಿತ್ರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಹಿಂದಿ ಚಿತ್ರರಂಗದ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ನಿರ್ದೇಶಕರು, ಕಲಾವಿದರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ ಎನ್ನುವ ವಿವರ ನೀಡಿದರು. ಸಮಾರೋಪ ಸಮಾರಂಭ ಮಾರ್ಚ್ 10 ರಂದು ಸಂಜೆ ನಡೆಯಲಿದ್ದು ಅಂದು ಏಷಿಯನ್, ಭಾರತೀಯ ಹಾಗು ಕನ್ನಡ ಚಲನಚಿತ್ರ ಸ್ಪರ್ಧೆಗಳ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 55 ರಾಷ್ಟ್ರಗಳ 200 ಚಲನಚಿತ್ರಗಳು ಪ್ರದರ್ಶಿತವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾದ 11 ಪರದೆಗಳು, ಚಾಮರಾಜಪೇಟೆಯಲ್ಲಿರುವ ಡಾ.ರಾಜ್‌ಭವನ,
ಕಲಾವಿದರ ಸಂಘ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿ ಅಕಾಡೆಮಿ ಪುರವಂಕರ ಸಭಾಂಗಣಯಲ್ಲಿ ಪ್ರತಿನಿಧಿಗಳಿಗೆ ಮಾರ್ಚ್ 4 ರಿಂದ ಪ್ರದರ್ಶನ ಆರಂಭವಾಗಲಿದೆ ಎಂದರು
# ಸ್ಪರ್ಧಾ ವಿಭಾಗ
ಏಷ್ಯಾ ಚಲನಚಿತ್ರ ವಿಭಾಗ
• ಭಾರತೀಯ ಚಲನಚಿತ್ರಗಳ ವಿಭಾಗ ಚಿತ್ರಭಾರತಿ (2020 ಮತ್ತು 2021)
ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ (2020 ಮತ್ತು 2021)
ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ಸ್ಪರ್ಧಾ ವಿಭಾಗ (2020 ಮತ್ತು 2021)
* ಸಮಕಾಲೀನ ವಿಶ್ವ ಸಿನಿಮಾ
ವಿದೇಶವೊಂದರ ವಿಶೇಷ ನೋಟ ಈಶಾನ್ಯ ರಾಜ್ಯಗಳ ವಿಶೇಷ ನೋಟ, ಮುನರಾವಲೋಕನ ವೋಲ್ಕರ್ ಸ್ಕೋಂಡ್ರಫ್ , ಭಾರತಿ ವಿಷ್ಣುವರ್ಧನ್
* ಆಜಾದಿ ಕಿ ಅಮೃತ್ ಮಹೋತ್ಸವ್ ಸ್ವಾತಂತ್ರ್ಯ ಸಮಾರಂಭದ 75 ನೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಲನಚಿತ್ರಗಳ ವಿಶೇಷ ಪ್ರದರ್ಶನ ನಡೆಯಲಿದೆ.
* ತುಳು ಚಿತ್ರರಂಗದ ಸುವರ್ಣ ಮಹೋತ್ಸವ
ಕರ್ನಾಟಕದ ಸಾಂಸ್ಕೃತಿಕ ತಿಕ ಪರಂಪರೆಗೆ ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆಗಳ ಕೊಡುಗೆ ಅಪಾರ. ಕನ್ನಡದ ಉಪಭಾಷೆ ತುಳುಭಾಷಾ ಚಲನಚಿತ್ರ ಪರಂಪರೆಗೆ ಈಗ ಐವತ್ತು ವರ್ಷ ತುಂಬಿತು. ತುಳು ಚಿತ್ರಗಳು ಈಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರರಂಗದ ಐವತ್ತು ವರ್ಷಗಳ ಒಂದು ನೋಟ, ಚಲನಚಿತ್ರ ಪ್ರದರ್ಶನ ಹಾಗೂ ವಿಚಾರ ಸಂಕಿರಣಗಳ ಮೂಲಕ ತುಳು ಚಿತ್ರರಂಗದ ಅವಲೋಕನ ನಡೆಯಲಿದೆ.
* ಸಾಧನೆ ಸ್ಮರಣೆ
ಸಂಚಾರಿ ವಿಜಯ್, ಪುನೀತ್ ರಾಜ್ ಕುಮಾರ್
* ಶ್ರದ್ಧಾಂಜಲಿ
ಕನ್ನಡ ಚಿತ್ರೋದ್ಯಮಕ್ಕೆ ಅಪಾರ ಕೊಡುಗೆ ನೀಡಿ ಅಗಲಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರುಗಳಿಗೆ ನೆನಪಿನಾಂಜಲಿ ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟಾರ್ ಹಿಮವಂತರಾಜ್, ಎಚ್. ಎನ್ ನರಹರಿ ರಾವ್, ನಿರ್ದೇಶಕ ಪಿ.ಶೇಷಾದ್ರಿ ಇದ್ದರು.
