ಬೆಂಗಳೂರು,ಫೆ.8- ಬಹುನಿರೀಕ್ಷಿತ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಾ.23ರಿಂದ 30ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಮಾ.23ರಂದು ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದ್ದು, 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರೋತ್ಸವದ ಅಂಗವಾಗಿ ಸಂವಾದ, ಚರ್ಚೆ, ವಿಚಾರ ಸಂಕಿರಣ, ಅತ್ಯುತ್ತಮ ನಿರ್ದೇಶಕರೊಂದಿಗೆ ಸಂವಾದ, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸರ್ಧಾ ವಿಭಾಗದಲ್ಲಿ ಏಷ್ಯಾ ಚಲನಚಿತ್ರಗಳು, ಭಾರತೀಯ ಚಲನಚಿತ್ರಗಳು, ಕನ್ನಡ ಚಲನಚಿತ್ರಗಳು, ಸಮಕಾಲೀನ ವಿಶ್ವ ಸಿನಿಮಾ, ಪುನರಾವಲೋಕನ ವಿಭಾಗ, ಭಾರತೀಯ ಸಿನಿಮಾ ಪುನರಾವಲೋಕನ, ಕನ್ನಡ ಸಿನಿಮಾ ಪುನರಾವಲೋಕನ ಮಾಡಲಾಗುತ್ತದೆ.
6 ದಿನದಲ್ಲಿ 50 ಕೋಟಿ ಟ್ರಾಫಿಕ್ ದಂಡ ಸಂಗ್ರಹ
ಶ್ರೇಷ್ಠ ಚಲನಚಿತ್ರಗಳ ಪುನರ್ ಮನನ ಜೊತೆಗೆ ವಿಶ್ವ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾಗಳ ಪುನರ್ ಮನನ ಮಾಡುವ ಉದ್ದೇಶವು ಇದೆ ಎಂದು ಹೇಳಿದರು.
ಜಂಟಿ ಅಧಿವೇಶನ: ವಾಕ್ಸಮರಕ್ಕೆ ವೇದಿಕೆ ಸಜ್ಜು
ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿರುವ ಚಲನಚಿತ್ರಗಳ ಪ್ರದರ್ಶನ ಹಾಗೂ ಚರ್ಚೆ ನಡೆಸಲಾಗುತ್ತದೆ ಜೊತೆಗೆ ಜನಪ್ರಿಯ ಕನ್ನಡ ಚಲನಚಿತ್ರಗಳ ಪ್ರದರ್ಶನವು ಚಲನಚಿತ್ರೋತ್ಸವದಲ್ಲಿ ಇರುತ್ತದ ಎಂದು ಅವರು ತಿಳಿಸಿದರು.
bangalore, international, film festival, 2023, March,