ಬೆಂಗಳೂರು,ಫೆ.25- ಮೊಮ್ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದ ಅತ್ತೆಯನ್ನು ಅಳಿಯನೇ ಕೊಲೆ ಮಾಡಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಕೊಲೆಯಾದವರು. ಆರೋಪಿ ಅಳಿಯ ಮೂಲತಃ ಬೆವೆಲ್‍ನಗರದ ದಿವಾಕರ್ (38) ತಲೆಮರೆಸಿಕೊಂಡಿದ್ದಾನೆ.
ಏಳಲ್ ಅರಸಿಗೆ ಐವರು ಮಕ್ಕಳಿದ್ದು, ಒಬ್ಬ ಮಗಳನ್ನು ಸ್ವಂತ ತಮ್ಮ ದಿವಾಕರ್‍ಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಈ ದಂಪತಿಗೆ ಹೆಣ್ಣು ಮಗುವಿದೆ. ಕೌಟುಂಬಿಕ ಕಾರಣಗಳಿಂದ ದಿವಾಕರ್ ಮತ್ತು ಪತ್ನಿ ಮಧ್ಯೆ ಜಗಳ ನಡೆಯುತ್ತಿದ್ದು ಇದರಿಂದ ಬೇಸತ್ತ ಪತ್ನಿ ದಿವಾಕರ್‍ನಿಂದ ದೂರವಾಗಿ ಮಗಳನ್ನು ಕರೆದುಕೊಂಡು ತಾಯಿ ಜೊತೆಗೆ ಕೋಲಾರದ ಕೆ.ಜಿ.ಎಫ್‍ನಲ್ಲಿ ವಾಸವಿದ್ದರು.
ಆರೋಪಿ ದಿವಾಕರ ಪತ್ನಿ ಹಾಗೂ ಅತ್ತೆಯ ಗಮನಕ್ಕೆ ತಾರದೇ ಕೆಂಗೇರಿ ನಾಗದೇವನ ಹಳ್ಳಿಯ ಬೃಂದಾವನ ಲೇಔಟ್‍ನ ತಂಗಿಯ ಮನೆಗೆ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ. ಈ ವಿಷಯ ತಿಳಿದು ಏಳಲ್ ಅರಸಿ, ತಂಗಿ ಸುಷ್ಮಾ ಹಾಗೂ ತಂಗಿ ಗಂಡ ಕಾರ್ತಿಕ್‍ರೊಂದಿಗೆ ಕೆಜಿಎಫ್‍ನಿಂದ ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಬೆಂಗಳೂರಿಗೆ ಬಂದು ಬೃಂದಾವನಲೇಔಟ್‍ನ ದಿವಾಕರ್‍ನ ತಂಗಿ ಮನೆಗೆ ಹೋಗಿ ಮೊಮ್ಮಗು ವೃತಿಕಾಳನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ.
ಒಂದೇ ಕುಟುಂಬದ ನಾಲ್ವರ ಕಗ್ಗೊಲೆ, ಬೆಚ್ಚಿಬಿದ್ದ ಭಟ್ಕಳ
ಆ ವೇಳೆ ದಿವಾಕರ್ ಹಾಗೂ ಅತ್ತೆ ನಡುವೆ ಜಗಳವಾಗಿದೆ. ದಿವಾಕರ್ ಮಗುವನ್ನು ಕಳುಹಿಸಿಕೊಡುವುದಿಲ್ಲವೆಂದು ಗಲಾಟೆ ಮಾಡಿದಾಗ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಒಂದು ಹಂತದಲ್ಲಿ ಕೋಪದಿಂದ ದಿವಾಕರ್ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಅತ್ತೆ ಏಳಲ್ ಅರಸಿ ಅವರ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದಾನೆ.
ಆ ಸಂದರ್ಭದಲ್ಲಿ ಇವರ ಮತ್ತೊಬ್ಬ ಮಗಳು ಸಿಂಧೂ ಅರಸಿ ತಕ್ಷಣ ತಾಯಿಯನ್ನು ರಕ್ಷಿಸಲು ಅಡ್ಡಹೋದಾಗ ಅವರಿಗೂ ಚಾಕುವಿನಿಂದ ಇರಿದಿದ್ದು, ಬಲಗೈ ಬೆರಳಿಗೆ ರಕ್ತಗಾಯವಾದಾಗ ತಕ್ಷಣ ದಿವಾಕರ್ ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದಾನೆ.
ಇತ್ತ ರಕ್ತದ ಮಡುವಿನಲ್ಲಿದ್ದ ಏಳಲ್ ಅರಸಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ
ಘಟನೆ ಸಂಬಂಧ ಸಿಂಧೂ ಅವರು ಪೊಲೀಸರಿಗೆ ಭಾವ ದಿವಾಕರ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ಆರೋಪಿ ದಿವಾಕರನ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
BANGALORE, mother -in -law, killed, Diwakar,