ಬೆಂಗಳೂರು, ಮಾ.4- ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರನ್ನು ನಾಮಕರಣ ಮಾಡ ಬೇಕೆಂಬ ಮನವಿಯನ್ನು ಪರಿಶೀಲಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತನ್ ಗಡ್ಕರಿ ಅವರು ತಿಳಿಸಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಗೆ ಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಕೋರಿ ನಿತಿನ್ ಗಡ್ಕರಿ ಅವರಿಗೆ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಪತ್ರ ಬರೆದಿದ್ದರು. ಪತ್ರ ಸ್ವೀಕರಿಸಿರುವ ಬಗ್ಗೆ ಶರವಣ ಅವರಿಗೆ ಪತ್ರ ಬರೆದಿರುವ ಗಡ್ಕರಿ ಅವರು, ನೀವು ಪತ್ರದಲ್ಲಿ ಮಾಡಿರುವ ಮನವಿ ಗಮನಿಸಿದ್ದು, ಹೆದ್ದಾರಿಗೆ ನಾಮಕರಣ ಮಾಡುವ ವಿಚಾರದಲ್ಲಿ ಗೌಡರ ಹೆಸರನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು- ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರನ್ನು ನಾಮಕರಣ ಮಾಡುವಂತೆ ಈ ಹಿಂದೆ ಶರವಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ, ಕೇಂದ್ರ ಸಚಿವ ಗಡ್ಕರಿ ಅವರಿಗೂ ಈ ಸಂಬಂಧ ಪತ್ರ ಬರೆದು ಮನವಿ ಮಾಡಿದ್ದರು.
Bangalore, Mysore, Expressway, nitin gadkari, name, HD Deve Gowda,