ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಮಸ್ಯೆಗಳಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

Social Share

ಬೆಂಗಳೂರು, ಫೆ.19-ಉದ್ಘಾಟನೆಗೆ ಸಿದ್ಧವಾಗುತ್ತಿರುವ ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನಗಳ ಸಂಚಾರ ದಟ್ಟಣೆ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಉಭಯ ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗಿದ್ದು, ಹೆದ್ದಾರಿ ನಿರ್ಮಾಣದ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ. ಆದರೆ, ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುವ ವಾಹನ ಸವಾರರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸಬೇಕಾಗಿದೆ.

ಹೆದ್ದಾರಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಯ ಮೇಲೆ ಮೂರು ಪಥ ಹಾಗೂ ಸೇತುವೆ ಕೆಳಗಿನ ದ್ವಿಪಥ ರಸ್ತೆಯಲ್ಲಿ ಬರುವ ವಾಹನಗಳು ಒಟ್ಟುಗೂಡಿ ಮುಂದೆ ಸಾಗಬೇಕಾಗಿರುವುದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣ. ಮೇಲ್ಸೇತುವೆ ಇಳಿಯುತ್ತಿದ್ದಂತೆ ರಸ್ತೆ ಕಿರಿದಾಗುವುದರಿಂದ ವಾಹನ ದಟ್ಟಣೆ ಸಹಜವಾಗಿದೆ. ಅಂದರೆ ಐದು ಪಥದಲ್ಲಿ ಬರುವ ವಾಹನಗಳು ದ್ವಿಪಥದ ರಸ್ತೆಯಲ್ಲಿ ಸಾಗಬೇಕಾಗಿದೆ.

ಆರತಕ್ಷತೆ ವೇಳೆ ರಸಗುಲ್ಲಕ್ಕಾಗಿ ಬಿತ್ತು 4 ಜನರ ಹೆಣ..!

ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ (ಪೀಕ್ ಹವರ್) ಮೈಸೂರು ರಸ್ತೆಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಬಳಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬುದು ವಾಹನ ಸವಾರರ ಆರೋಪ. ಅದರಲ್ಲೂ ರಜಾದಿನಗಳಂದು ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಮೈಸೂರು ಕಡೆಯಿಂದ ಬೆಂಗಳೂರಿಗೆ ಅಗಮಿಸುವ ವಾಹನಗಳಿಗೆ ಈಗಾಗಲೇ ಸಂಚಾರ ದಟ್ಟಣೆ ಬಿಸಿ ತಟ್ಟತೊಡಗಿದೆ. ಭಾನುವಾರ ಸಂಜೆ ವೇಳೆ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ಮೈಸೂರು ಕಡೆಯಿಂದ ವೇಗವಾಗಿ ಆಗಮಿಸುವ ವಾಹನಗಳಿಂದ ಮೇಲ್ಸೇತುವೆ ಮೇಲೆ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೈಸೂರಿನಿಂದ ನಗರಕ್ಕೆ ಒಂದೂವರೆ ಗಂಟೆಯಲ್ಲಿ ಬರುವ ವಾಹನ ಸವಾರರು ಬೆಂಗಳೂರು ಪ್ರವೇಶಿಸುವ ಸಂದರ್ಭದಲ್ಲಿ ಎದುರಾಗುವ ದಟ್ಟಣೆಯಿಂದ ಪರಿತಪಿಸುವಂತಾಗಿದೆ. ಆದರೆ, ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಈ ಸಮಸ್ಯೆ ಇಲ್ಲ.

ವಿಚಾರಣೆಗೆ ಕಾಲವಕಾಶ ಕೋರಿದ ಮನೀಷ್ ಸಿಸೋಡಿಯಾ

ಮೆಟ್ರೋ ರೈಲಿನ ಚಲ್ಲಘಟ್ಟ ನಿಲ್ದಾಣದಿಂದ ಈ ರಸ್ತೆ ಸಮೀಪದಲ್ಲೇ ಮೆಟ್ರೋ ರೈಲು ಮಾರ್ಗ ಹಾದು ಹೋಗಿದ್ದು, ರೈಲ್ವೆ ಮಾರ್ಗಕ್ಕಾಗಿ ಮೇಲ್ಸೇತುವೆ ನಿರ್ಮಾಣಗೊಂಡಿದೆ. ಈ ಮೇಲ್ಸೇತುವೆ ಕೆಳಭಾಗದಲ್ಲಿ ರಸ್ತೆ ಅಗಲೀಕರಣ ಆರಂಭವಾಗಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ ಕಾದು ನೋಡಬೇಕು.

ಹೆದ್ದಾರಿಯ ಇಕ್ಕೆಲದಲ್ಲಿ ನಿರ್ಮಿಸುತ್ತಿರುವ ಸರ್ವಿಸ್ ರಸ್ತೆಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೆದ್ದಾರಿಯಲ್ಲಿ ಬಳಕೆದಾರರ ಶುಲ್ಕ ಆರಂಭವಾದ ಮೇಲೆ ಸ್ಥಳೀಯರು ಸರ್ವಿಸ್ ರಸ್ತೆಯನ್ನೇ ಅವಲಂಭಿಸಬೇಕಿದೆ.

bangalore, mysore ,expressway, traffic,

Articles You Might Like

Share This Article