ಬೆಂಗಳೂರು,ಜ.16- ಸಾಂಸ್ಕøತಿಕ ನಗರಿ ಮೈಸೂರು ಹಾಗೂ ಬೆಂಗಳೂರಿನ ನಡುವೆ ಕೆಎಸ್ಆರ್ಟಿಸಿ ಎಲೆಕ್ಟ್ರೀಕ್ ಬಸ್ ಸೇವೆ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಇಂದು ಮುಂಜಾನೆ 6.45ಕ್ಕೆ ಮೈಸೂರು ಕಡೆ ಪ್ರಯಾಣ ಬೆಳೆಸಿದ ಎಲೆಕ್ಟ್ರೀಕ್ ಬಸ್ ಸೇವೆ ಆರಂಭವಾಯಿತು.
ಮೊದಲ ಬಸ್ನಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು. ಬೆಳಗ್ಗೆ 6.45ಕ್ಕೆ ಬೆಂಗಳೂರು ಬಿಟ್ಟ ಎಲೆಕ್ಟ್ರೀಕ್ ಬಸ್ ಬೆಳಿಗ್ಗೆ 8.45ಕ್ಕೆ ಮೈಸೂರು ಬಸ್ ನಿಲ್ದಾಣ ತಲುಪುವಲ್ಲಿ ಯಶಸ್ವಿಯಾಗಿದೆ.
ವೋಲ್ವೋ ಬಸ್ ದರಕ್ಕಿಂತ ಕಡಿಮೆ ದರ ಅಂದರೆ ಕೇವಲ 300 ರೂ.ಗಳನ್ನು ನೀಡಿ ಇನ್ಮುಂದೆ ಪ್ರಯಾಣಿಕರು ಮೈಸೂರಿಗೆ ಪ್ರಯಾಣ ಬೆಳೆಸಬಹುದಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ಬಸ್ ಇದಾಗಿದ್ದು, ಕೇವಲ ಎರಡೂವರೆ ಗಂಟೆ ಚಾರ್ಜಿಂಗ್ ಮಾಡಿದರೆ 300 ಕಿ.ಮೀ ಸಂಚರಿಸಬಹುದಾಗಿದೆ. ಬಸ್ನಲ್ಲಿ ಪ್ರಯಾಣಿಕರು ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ
ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿರುವ ಎಲೆಕ್ಟ್ರೀಕ್ ಬಸ್ನಲ್ಲಿ ಪ್ರಯಾಣಿಕರ ಬೇಸರ ಕಳೆಯಲು ಎರಡು ಟಿವಿಗಳನ್ನು ಅಳವಡಿಕೆ ಮಾಡಿರುವುದರಿಂದ ಜನ ಎಲೆಕ್ಟ್ರೀಕ್ ಬಸ್ಗಳಲ್ಲಿ ಸಂಚರಿಸಲು ಮುಗಿ ಬೀಳುವ ಸಾಧ್ಯತೆಗಳಿವೆ.
Bangalore, Mysore, KSRTC, Electric Bus,