ಬೆಂಗಳೂರಿನಲ್ಲಿ ವಿಷವಾಗುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ

Social Share

ಬೆಂಗಳೂರು,ಅ.27- ಹಾನಿಕಾರಕ ಪಟಾಕಿಗಳಿಗೆ ನಿಷೇಧವಿದ್ದರೂ ಜನ ಮಾತ್ರ ಪಟಾಕಿ ಸಿಡಿಸುವುದನ್ನು ಬಿಡದಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ವಿಷದ ಗಾಳಿಗೆ ತುತ್ತಾಗುತ್ತಿದ್ಯಾ ಎಂಬ ಅನುಮಾನ ಕಾಡತೊಡಗಿದೆ.
ನಿಷೇಧದ ನಡುವೆಯೂ ಪಟಾಕಿ ಸ್ಪೋಟ ಹೆಚ್ಚುತ್ತಿರುವುದರಿಂದ ನಗರದ ವಾಯು ಮಾಲಿನ್ಯ ಕಲುಷಿತಗೊಂಡಿರುವುದು ಅಂಕಿ ಅಂಶಗಳಲ್ಲಿ ಬಹಿರಂಗಗೊಂಡಿದೆ.

ಇದೇ ರೀತಿ ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಟ್ಟರೆ ನಗರದ ಗಾಳಿ ವಿಷವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ಮಂದಿ ಪಟಾಕಿ ಸಿಡಿಸಿದ್ದರಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಗೊಂಡಿರುವುದು ಮಾತ್ರವಲ್ಲ ಗಾಳಿಯಲ್ಲಿ ರಾಸಾಯನಿಕ ವಸ್ತುಗಳು ಸೇರ್ಪಡೆಗೊಂಡಿರುವುದು ಕಂಡು ಬಂದಿದೆ.

ಸಿಲ್ಕ್ ಬೋಡ್, ಸಿಟಿ ರೈಲ್ವೆ ನಿಲ್ದಾಣ, ಜಯನಗರ ಸುತ್ತ ಮುತ್ತಲ ಪ್ರದೇಶಗಳ ವಾಯು ಗುಣಮಟ್ಟ ಪರಿಶೀಲಿಸಿದಾದ ಗುಣಮಟ್ಟದ ಸೂಚ್ಯಂಕ ಹೆಚ್ಚು ದಾಖಲಾಗಿರುವುದು ಬಯಲಾಗಿದೆ. ನಗರದಲ್ಲಿ ಪಟಾಕಿ ಸಿಡಿತಕ್ಕೆ ನಿಷೇಧ ಹೇರಿದ್ದರು ಅನೇಕ ಕಡೆಗಳಲ್ಲಿ ಹಸಿರು ಪಟಾಕಿ ಜೊತೆ ಎಲ್ಲಾ ರೀತಿಯ ರಾಸಾಯನಿಕ ಬಳಕೆ ಪಟಾಕಿ ಸ್ಪೋಟ ಮಾಡುತ್ತಿರುವುದರಿಂದ ಇಂತಹ ಪರಿಸ್ಥಿತಿ ಬಂದೋದಗಿದೆ.

ಕೋಟಿ ಕಂಠ ಗಾಯನ : 1 ಕೋಟಿ 10 ಲಕ್ಷ ಜನ ನೋಂದಣಿ

ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದ್ರೂ ಜನ ಮನಸ್ಸೋ ಇಚ್ಚೆ ಅವಲ್ಲಾ ಮೀರಿ ಪಟಾಕಿ ಸಿಡಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದ್ದರೂ ಕೇಳುವರ್ಯಾರು ಎನ್ನುವಂತಾಗಿದೆ.
ಹಬ್ಬ ಕಳೆದರೂ ಜನ ಮಾತ್ರ ಪಟಾಕಿ ಸಿಡಿಸುವುದನ್ನು ಮುಂದುವರೆಸಿರುವುದರಿಂದ ಮುಂದಿನ ದಿನಗಳಲ್ಲೂ ನಗರದಲ್ಲಿ ಮಾಲಿನ್ಯ ಮತ್ತಷ್ಟು ಹದಗೆಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಹೀಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯವರು ಪಟಾಕಿ ಸಿಡಿತಕ್ಕೆ ಕಡಿವಾಣ ಹಾಕಲು ಮುಂದಾಗಬೇಕಿದೆ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ. ನಗರದ ವಾಯು ಗುಣಮಟ್ಟ ಸೂಚ್ಯಂಕ ಹೀಗಿದೆ.
ಪ್ರದೇಶ ಹಬ್ಬಕ್ಕೂ ಮೊದಲು ಈಗಿನ ಪ್ರಮಾಣ

ಮೆಜೆಸ್ಟಿಕ್ ಎಕ್ಯೂಐ 90 ಎಕ್ಯೂಐ 114

ಹೊಂಬೇಗೌಡ ನಗರ ಎಕ್ಯೂಐ 96 ಎಕ್ಯೂಐ 120

ಜಯನಗರ 5ನೇ ಬ್ಲಾಕ್ ಎಕ್ಯೂಐ93 ಎಕ್ಯೂಐ 210

ಬಿಟಿಎಂ ಲೇಔಟ್ ಎಕ್ಯೂಐ 72 ಎಕ್ಯೂಐ 102

ಸಿಲ್ಕï ಬೋರ್ಡ್ ಜಂಕ್ಷನ್ ಎಕ್ಯೂಐ 190 ಎಕ್ಯೂಐ 246

ಹೆಬ್ಬಾಳ ಎಕ್ಯೂಐ 115 ಎಕ್ಯೂಐ 180

ಪೀಣ್ಯ ಕೈಗಾರಿಕಾ ಪ್ರದೇಶ ಎಕ್ಯೂಐ 108 ಎಕ್ಯೂಐ 190 – 210

Articles You Might Like

Share This Article