ಬಿಬಿಎಂಪಿಗೆ ಅಂಟಿದ ‘ಭ್ರಷ್ಟ’ರೋಗದಿಂದ ‘ಗುಂಡಿ ಸಿಟಿ’ಯಾದ ಬೆಂಗಳೂರು

Social Share

ಬೆಂಗಳೂರು,ಜ.17- ನಗರದ ರಸ್ತೆಗಳು ಎಲ್ಲೇಂದರಲ್ಲಿ ಕುಸಿದು ಬೀಳುವುದು ಮಾಮೂಲಾಗಿ ಹೋಗಿದೆ. ಬಿಬಿಎಂಪಿಯ ಕಳಪೆ ಕಾಮಗಾರಿಗಳಿಂದಾಗಿ ನಗರದ ಪ್ರಮುಖ ಪ್ರದೇಶಗಳ ರಸ್ತೆಗಳೇ ಕುಸಿದು ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾಲಕ್ಷ್ಮೀ ಬಡಾವಣೆಯ ಮುಖ್ಯ ರಸ್ತೆಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿಯ ರಸ್ತೆ ಏಕಾಏಕಿ ಕುಸಿದುಬಿದ್ದಿದೆ. ಈ ಹಿಂದೆ ಈ ಮಾರ್ಗದಲ್ಲಿ ಜಲಮಂಡಳಿಯವರು ಪೈಪ್‍ಲೈನ್ ಅಳವಡಿಕೆಗೆ ರಸ್ತೆ ಅಗೆದು ನಂತರ ಅದನ್ನು ಸೂಕ್ತವಾಗಿ ಭರ್ತಿ ಮಾಡದ ಹಿನ್ನಲೆಯಲ್ಲಿ ಇಂತಹ ಘಟನೆ ನಡೆದಿದೆ ಎನ್ನಲಾಗಿದೆ.

ಇಂದು ಬೆಳಗ್ಗೆ ಏಕಾಏಕಿ ರಸ್ತೆ ಕುಸಿದುಬಿದ್ದರೂ ಬಿಬಿಎಂಪಿಯವರಾಗಲಿ ಆಥವಾ ಪೊಲೀಸರಾಗಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲೂ ಆರ್ಥಿಕ ಹಿಂಜರಿತ : ಸತ್ಯ ಮುಚ್ಚಿಡುತ್ತಿರುವ ಕೇಂದ್ರ ಸರ್ಕಾರ

ರಸ್ತೆಗೆ ಡಾಂಬರು ಹಾಕಿದ ಎರಡೇ ದಿನದಲ್ಲಿ ಜಲಮಂಡಳಿ ಪೈಪ್‍ಲೈನ್ ಹಾದು ಹೋಗಿರುವ ರಸ್ತೆಯಲ್ಲಿ ಮೂರುವರೆ ಅಡಿ ಆಳಕ್ಕೆ ಆಳಕ್ಕೆ ರಸ್ತೆ ಕುಸಿದಿದೆ. ಪೈಪ್‍ಲೈನ್ ಹಾದು ಹೋಗಿದ್ದ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಿ ರಸ್ತೆ ಕುಸಿದಿರುವುದರಿಂದ ಜಲಮಂಡಳಿಯ ಪೈಪ್‍ಲೈನ್ ಕೂಡ ಕಟ್ಟಾಗಿರುವುದು ಕಂಡು ಬಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬರುವಿಕೆಗೆ ನಗರದ ಹಲವಾರು ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಅವರು ಬಂದು ಹೋದ ನಂತರ ಆ ರಸ್ತೆಗಳಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿದ್ದವು.

ರಸ್ತೆಗಳ ಅವ್ಯವಸ್ಥೆ ಬಗ್ಗೆ ಕೆಲವರು ಸ್ವತಃ ಪ್ರಧಾನ ಮಂತ್ರಿಗಳಿಗೆ ದೂರು ನೀಡಿದ್ದರೂ. ಸಾರ್ವಜನಿಕರ ದೂರಿನ ಆಧಾರದ ಮೇಲೆ ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿಗಳ ಕಚೇರಿ ಸೂಚಿಸಿದ್ದರೂ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಸುಧಾರಿಸದಿರುವುದು ದುರಂತವೇ ಸರಿ.

Bangalore, Roads, collaps, Mahalakshmi layout,

Articles You Might Like

Share This Article