ಬೆಂಗಳೂರು,ಜ.21- ನಗರದಲ್ಲಿ ರಸ್ತೆ ಕುಸಿದು ಬೀಳುವ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಬ್ರಿಗೇಡ್ ರೋಡ್, ಮಹಾಲಕ್ಷ್ಮಿ ಲೇಔಟ್ಗಳಲ್ಲಿ ರಸ್ತೆ ಗುಂಡಿ ಕುಸಿದುಬಿದ್ದ ರೀತಿಯಲ್ಲೇ ನಗರದ ರಸ್ತೆಯಲ್ಲಿ ಗುಂಡಿ ಗಂಡಾಂತರ ಕಾಣಿಸಿಕೊಂಡಿದೆ.
ಇಟ್ಟುಮಡು ಮುಖ್ಯ ರಸ್ತೆಯಲ್ಲಿ ಮಾರುತಿ ನಗರದ ರಸ್ತೆ ಕುಸಿದು ಐದು ಅಡಿಗೂ ಹೆಚ್ಚು ಕಂದಕ ಬಿದ್ದಿರುವುದು ಕಂಡು ಬಂದಿದೆ. ಕಳೆದ ಒಂದು ತಿಂಗಳಿನಿಂದ ಸ್ವಲ್ಪ ಸ್ವಲ್ಪ ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟವರು ಯಾವುದೆ ಕ್ರಮ ಕೈಗೊಳ್ಳದ ಕಾರಣ ರಸ್ತೆ ಇದೀಗ ಸಂಪೂರ್ಣ ಕುಸಿದಿದೆ.
ರಸ್ತೆ ಕುಸಿದಿದ್ದರೂ ಸ್ಥಳಕ್ಕೆ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ ಕೇವಲ ಬ್ಯಾರಿಕೇಡ್ ಹಾಕಿ ಹೋಗಿರುವುದಕ್ಕೆ ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಸ್ತಿ ಫೆಡರೇಷನ್ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ
ಮೊದಲೇ ಇದು ಕಿರಿದಾದ ರಸ್ತೆ ಇದರ ಜೊತೆಗೆ ರಸ್ತೆ ಕುಸಿದಿರುವುದರಿಂದ ಟ್ರಾಫಿಕ್ ಸಮಸ್ಯ ಹೆಚ್ಚಾಗ್ತಿದೆ ಕೂಡಲೆ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ಧಾರೆ.
ರಸ್ತೆ ಕುಸಿದಿರುವ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ರಸ್ತೆ ಗುಂಡಿಯಿಂದ ಅನಾಹುತ ಸಂಭವಿಸಿದರೆ ಅದರ ಹೊಣೆಯನ್ನು ಬಿಬಿಎಂಪಿಯವರೇ ವಹಿಸಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Bangalore, roads, collapsing, BBMP,