ಬೌಬೌ ಸಿಟಿಯಾದ ಬೆಂಗಳೂರು, ಮಿತಿಮೀರಿದ ಬೀದಿ ನಾಯಿಗಳ ಹಾವಳಿ

Social Share

ಬೆಂಗಳೂರು, ಡಿ.14- ಪೋಷಕರೇ ಎಚ್ಚರ..! ನಗರದಲ್ಲಿ ಹೆಚ್ಚಾಗುತ್ತಿರುವೆ ಬೀದಿ ನಾಯಿಗಳ ಹಾವಳಿ… ತಮ್ಮ ಮಕ್ಕಳನ್ನು ಮನೆಯಿಂದ ಒಬ್ಬೊಬ್ಬರನ್ನೇ ಬಿಡಬೇಡಿ. ದಿನನಿತ್ಯ ಮಕ್ಕಳ ಮೇಲೆ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಪೋಷಕರು ಕಂಗಾಲಾಗಿದ್ದಾರೆ.

ಪಶು ಸಂಗೋಪನಾ ಇಲಾಖೆಯಿಂದಲೇ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಪ್ರತಿದಿನ ಸರಾಸರಿ 70ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 70,057 ಪ್ರಕರಣಗಳು ದಾಖಲಾಗಿವೆ. 2019-20ರಲ್ಲಿ 42,818 , 2020-21ರಲ್ಲಿ 18,629, 2021-22ರಲ್ಲಿ 17,610 ಪ್ರಕರಣಗಳು ದಾಖಲಾಗಿವೆ.

ರಾತ್ರಿ ವೇಳೆ ಹೆಚ್ಚು ದಾಳಿಗಳಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ. ಬೀದಿ ಬದಿ ಇರುವ ನಿರ್ಗತಿಕರ ಮೇಲೂ ಕೂಡ ದಾಳಿ ಮಾಡುತ್ತಿವೆ. ದ್ವಿಚಕ್ರ ವಾಹನದಲ್ಲಿ ತೆರಳುವ ಸವಾರರ ಮೇಲೂ ನಾಯಿಗಳು ದಾಳಿ ನಡೆಸುತ್ತಿದ್ದು, ತಪ್ಪಿಸಿಕೊಳ್ಳಲು ಹೋಗಿ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ.

ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿ ವಿಧಿವಿಜ್ಞಾನ ವಿವಿ ಸ್ಥಾಪನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 3.09 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳ ಕಾಟಕ್ಕೆ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ?
ಪೂರ್ವ ವಲಯ 44,302
ಪಶ್ಚಿಮ ವಲಯ 28,482
ದಕ್ಷಿಣ ವಲಯ 39,562
ಆರ್‍ಆರ್ ನಗರ 29,170
ದಾಸರಹಳ್ಳಿ 23,170
ಯಲಹಂಕ 36,219
ಬೊಮ್ಮನಹಳ್ಳಿ 38,940
ಮಹದೇವಪುರ 46,233

ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಪ್ರತಿ ವರ್ಷ 3 ರಿಂದ 5 ಕೋಟಿ ರೂ. ಹಣ ಖರ್ಚು ಮಾಡಲಾಗುತ್ತಿದೆ. ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಚಿಕಿತ್ಸೆ ನೀಡಲು ಕೋಟಿ ಕೋಟಿ ಹಣ ಖರ್ಚಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 1,81,585 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ಆದರೂ ಸಹ ಸಂತಾನ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ ಎಂದು ಬಿಬಿಎಂಪಿ ಪಶುಪಾಲನಾ ಅಧಿಕಾರಿ ರವಿಕುಮಾರ್ ಮಾಹಿತಿ ತಿಳಿಸಿದ್ದಾರೆ.

Bangalore, stray dogs, BBMP,

Articles You Might Like

Share This Article