ಬೆಂಗಳೂರು,ಫೆ.20- ಪರೀಕ್ಷೆ ನಡೆದು 10 ವರ್ಷಗಳ ಬಳಿಕೆ ಫಲಿತಾಂಶ ಪ್ರಕಟಿಸುವ ಮೂಲಕ ಬೆಂಗಳೂರು ವಿಶ್ವ ವಿದ್ಯಾಲಯ ವಿಶ್ವ ದಾಖಲೆ ನಿರ್ಮಿಸಿದೆ. ವಿಶ್ವವಿದ್ಯಾಲಯದ ಸಿಬ್ಬಂದಿಗಳು ಮಾಡಿದ್ದ ಪ್ರಮಾದದಿಂದ ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳು ಮಿಸ್ ಆಗಿದ್ದ ಪರಿಣಾಮ 10 ವರ್ಷಗಳ ಬಳಿಕ ವಿವಿ ಫಲಿತಾಂಶ ಪ್ರಕಟಿಸಿದೆ.
2013ರಲ್ಲಿ ನಡೆದಿದ್ದ ಪರೀಕ್ಷೆಳಿಗೆ 2023ರಲ್ಲಿ ಫಲಿತಾಂಶ ನೀಡುವ ಮೂಲಕ ಬೆಂಗಳೂರು ವಿವಿ ವಿಶ್ವದಾಖಲೆ ಬರೆದಿದೆ. 2013ರಲ್ಲಿ ಸುಮಾರು 110 ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದರು ಆದರೆ, ಈ ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಕಾರಣ ಇದುವರೆಗೂ ಫಲಿತಾಂಶ ನೀಡಲು ಸಾಧ್ಯವಾಗಿರಲಿಲ್ಲ.
ಫಲಿತಾಂಶಕ್ಕಾಗಿ ಹೋರಾಟ ನಡೆಸಿ ಅದರಲ್ಲಿ ವಿಫಲರಾಗಿ ತಮ್ಮ ಫಲಿತಾಂಶವನ್ನೇ ಮರೆತು ಹೋಗಿದ್ದ 95 ಪದವಿ ಹಾಗೂ 15 ಸ್ನಾತಕೋತ್ತರ ವಿದ್ಯಾರ್ಥಿಗಳು ಇದೀಗ ತಮ್ಮ ಫಲಿತಾಂಶ ಬಿಡುಗಡೆಯಾಗಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗಂಡ ಮತ್ತುಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ ಮಹಿಳೆ
ಹತ್ತು ವರ್ಷಗಳ ಹಿಂದೆ ನಡೆದಿದ್ದ ಪರೀಕ್ಷೆಗೆ ಇದುವರೆಗೂ ಫಲಿತಾಂಶ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವ ಉದ್ದೇಶದಿಂದ ವಿವಿ ಸಿಂಡಿಕೇಟ್ ಸಭೆಯಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟ ಮಾಡಲು ತೀರ್ಮಾನಿಸಲಾಗಿದೆ ಎಂದು ಪರೀಕ್ಷಾ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೋಫೆಸರ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
ಹತ್ತು ವರ್ಷಗಳಾದರೂ ಕಳೆದು ಹೋಗಿದ್ದ ಉತ್ತರಪತ್ರಿಕೆಗಳು ಸಿಗದ ಕಾರಣ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಇತರ ವಿಷಯದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಿಸಲ್ಟ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಡಿಜಿಟಲ್ ಮೀಟರ್ ಅಳವಡಿಕೆಯಿಂದ ದುಪ್ಪಟ್ಟಾಯ್ತು ಕರೆಂಟ್ ಬಿಲ್..!
ಉತ್ತರ ಪತ್ರಿಕೆಗಳು ಮಿಸ್ ಆಗಿದ್ದ ಪ್ರಕರಣ ಕುರಿತಂತೆ ತನಿಖೆ ನಡೆಸಲು ಸಿಂಡಿಕೇಟ್ ಸದಸ್ಯ ಟಿ.ವಿ.ರಾಜು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. 10 ವರ್ಷಗಳ ಬಳಿಕ ಸಮಿತಿ ವರದಿ ನೀಡಿರುವ ಆಧಾರದ ಮೇಲೆ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳ ಗಳಿಸಿದ ಅಂಕದ ಆಧಾರದ ಮೇಲೆ ಫಲಿತಾಂಶ ಪ್ರಕಟ ಮಾಡಲು ತೀರ್ಮಾನಿಸಲಾಗಿದೆ. ಇಂದು ಅಥವಾ ನಾಳೆಯೊಳಗೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
Bangalore, University, 10 years, result,