ಬೆಂಗಳೂರು ವಿವಿಯ ಮತ್ತೊಂದು ಎಡವಟ್ಟು: ದಿಡೀರ್ ಪರೀಕ್ಷೆ ಮುಂದೂಡಿಕೆ

Social Share

ಬೆಂಗಳೂರು.ಅ.1- ಪರೀಕ್ಷೆ ಬರೆಯಲು ಬಂದಿದ್ದ ನೂರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಬೆಗಳೂರು ನಗರ ವಿವಿ ಚೆಲ್ಲಾಟವಾಡಿದೆ. ಈ ವರ್ಷದ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್‍ನಲ್ಲಿ ನೀಡಿದ ಪ್ರಶ್ನೆಪತ್ರಿಕೆ ಕಂಡು ದಿಗ್ಬಾಂತರಾಗುವಂತಾಗಿತ್ತು. ಕಾರಣ ವಿವಿ ಸಿಬ್ಬಂದಿಗಳು ಈ ವರ್ಷದ ಪ್ರಶ್ನೆ ಪತ್ರಿಕೆ ಬದಲಿಗೆ ಕಳೆದ ವರ್ಷದ ಪ್ರಶ್ನೆ ಪತ್ರಿಕೆ ನೀಡಿದ್ದರು.

ವಿವಿಯ ಮೌಲ್ಯಮಾಪನ ವಿಭಾಗದ ಕುಲ ಸಚಿವರ ಈ ನಿರ್ಲಕ್ಷ್ಯದಿಂದಾಗಿ ನಿನ್ನೆ ನಡೆಯಬೇಕಿದ್ದ ಬಿಎಸ್‍ಸಿ ಬಯೋಟೆಕ್ನಾಲಜಿಯ ನಾಲ್ಕನೆ ಸೆಮಿಸ್ಟರ್‍ನ ಜೆಜಿಟಿಕ್ ಎಂಜಿನಿಯರಿಂಗ್ ವಿಷಯದ ಪರೀಕ್ಷೆ ಮುಂದೂಡಲಾಗಿದೆ.

ರಾಜ್ಯದ ನಾನಾ ಮೂಲೆಗಳಿಂದ ಪರೀಕ್ಷೆ ಬರೆಯಲು ಬಂದಿದ್ದ ನೂರಾರು ವಿದ್ಯಾರ್ಥಿಗಳು ವಿವಿಯ ಈ ಬೇಜವಬ್ದಾರಿತನಕ್ಕೆ ಹಿಡಿಶಾಪ ಹಾಕುತ್ತ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗಳಿಗೆ ಹಿಂತಿರುಗುವಂತಾಯಿತು.

ತಾನು ಮಾಡಿದ ಎಡವಟ್ಟು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ವಿವಿ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಮುಂದೂಡಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಪೋಸ್ಟ್ ಫೋನ್ ಮಾಡಲಾಗಿದೆ ಎಂದು ವಿವಿ ಆಡಳಿತ ಲಿಖಿತ ಪ್ರಕಟಣೆ ಹೊರಡಿಸಿದೆ.
ಪ್ರಶ್ನೆ ಪತ್ರಿಕೆ ಕ್ಯೂಆರ್ ಕೋಡ್ ಬದಲಾಗಿರುವುದರಿಂದ ಇಂತಹ ಸಮಸ್ಯೆ ಉಂಟಾಗಿದೆ. ಹೀಗಾಗಿ ಪರೀಕ್ಷೆ ಮುಂದೂಡಿದ್ದೇವೆ.

ಹೀಗಾಗಿ ಪರೀಕ್ಷೆಯನ್ನು ಮುಂದಿನ ತಿಂಗಳಿಗೆ ಮುಂದೂಡಿ ಇಂತಹ ಪ್ರಮಾದಕ್ಕೆ ಕಾರಣರಾಗಿರುವ ಬಿಒಇ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಬೆಂಗಳೂರು ನಗರ ವಿವಿ ಮËಲ್ಯ ಮಾಪನ ವಿಭಾಗದ ಕುಲಸಚಿವ ಡಾ. ಲೋಕೇಶ್ ತಿಳಿಸಿದ್ದಾರೆ.

Articles You Might Like

Share This Article