ನಡು ರಸ್ತೆಯಲ್ಲೇ ತಲೆ ಹಾಗೂ ಮುಖ ಜಜ್ಜಿ ಯುವಕನ ಬರ್ಬರ ಕೊಲೆ

Social Share

ಬೆಂಗಳೂರು, ಡಿ.4- ನಡು ರಸ್ತೆಯಲ್ಲೇ ಯುವಕ ನೊಬ್ಬನ ಮೇಲೆ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ರುವ ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ಸುಮಾರು 12.30ರ ಸಂದರ್ಭದಲ್ಲಿ ಕೆಪಿ ಅಗ್ರಹಾರದ 5ನೆ ಕ್ರಾಸ್, ಹೇಮಂತ್ ಮೆಡಿಕಲ್ ಸ್ಟೋರ್ ಬಳಿ ಈ ಕೊಲೆ ನಡೆದಿದೆ.

ಸುಮಾರು 30 ವರ್ಷದ ಯುವಕ ಕೊಲೆಯಾಗಿ ದ್ದಾನೆ. ಈತನ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಈ ಯುವಕನೊಂದಿಗೆ ಜಗಳವಾಡಿ ನಂತರ ಹಲ್ಲೆ ನಡೆಸಿದ್ದಾರೆ. ಆತ ಕೆಳಗೆ ಬಿದ್ದ ತಕ್ಷಣ ಕಲ್ಲಿನಿಂದ ತಲೆ ಹಾಗೂ ಮುಖವನ್ನು ಜಜ್ಜಿ ಗುರುತು ಸಿಗದಂತೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಗುಜರಾತ್‍ ಚುನಾವಣೆ : ನಾಳೆ 2ನೇ ಹಂತದ ಮತದಾನ

ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಕೆಪಿ ಅಗ್ರಹಾರ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊಲೆಯಾದ ಯುವಕ ಹಸಿರು ಬಣ್ಣದ ಟೀ ಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿದ್ದಾನೆ.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

ಯುವಕ ಯಾರು, ಈತನನ್ನು ಯಾವ ಕಾರಣಕ್ಕಾಗಿ ಯಾರು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

#BangaloreCrime, #MurderReported, #BengaluruPolice, #MurderOnRoad,

Articles You Might Like

Share This Article