Thursday, September 19, 2024
Homeರಾಷ್ಟ್ರೀಯ | Nationalಢಾಕಾದಿಂದ 205 ಜನರನ್ನು ದೆಹಲಿಗೆ ಕರೆತಂದ ಏರ್ ಇಂಡಿಯಾ ವಿಮಾನ

ಢಾಕಾದಿಂದ 205 ಜನರನ್ನು ದೆಹಲಿಗೆ ಕರೆತಂದ ಏರ್ ಇಂಡಿಯಾ ವಿಮಾನ

ನವದೆಹಲಿ, ಆ.7- ದಂಗೆಯಿಂದ ನಲುಗಿರುವ ಬಾಂಗ್ಲಾ ದೇಶದ ಢಾಕಾದಿಂದ ವಿಶೇಷ ಏರ್ ಇಂಡಿಯಾ ವಿಮಾನ ಆರು ಶಿಶುಗಳು ಸೇರಿದಂತೆ 205 ಜನರನ್ನು ಬೆಳಿಗ್ಗೆ ನವದೆಹಲಿಗೆ ಕರೆತಂದಿದೆ.

2 ದಿನ ನಿಲ್ಲಿಸಿದ್ದ ಸೇವೆಯನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇಂದಿನಿಂದ ತನ್ನ ನಿಗದಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ. ತಡರಾತ್ರಿ ಬಾಂಗ್ಲಾದೇಶದ ರಾಜಧಾನಿಗೆ ತೆರಳಿದ್ದ 321 ನಿಯೋ ವಿಮಾನ ಇಂದು ಮುಂಜಾನೆ ಅಲ್ಲಿಂದ ಹೊರಟು ನವದೆಹಲಿಗೆ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಯಾವುದೇ ಪ್ರಯಾಣಿಕರಿಲ್ಲದೆ ರಾಷ್ಟ್ರ ರಾಜಧಾನಿಯಿಂದ ಹಾರಿದ ವಿಮಾನವನ್ನು ಏರ್ ಇಂಡಿಯಾ ಬಹಳ ಕಡಿಮೆ ಸೂಚನೆಯಲ್ಲಿ ನಿರ್ವಹಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಸ್ತಾರಾ ಮತ್ತು ಇಂಡಿಗೋ ಸಹ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ಸೇವೆಗಳನ್ನು ನಿರ್ವಹಿಸುತ್ತವೆ. ವಿಸ್ತಾರಾ ಮುಂಬೈನಿಂದ ದೈನಂದಿನ ವಿಮಾನಗಳನ್ನು ಮತ್ತು ದೆಹಲಿಯಿಂದ ಢಾಕಾಕ್ಕೆ ಮೂರು ಸಾಪ್ತಾಹಿಕ ಸೇವೆಗಳನ್ನು ನಿರ್ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ, ಇಂಡಿಗೋ ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ಢಾಕಾಗೆ ಒಂದು ದೈನಂದಿನ ವಿಮಾನವನ್ನು ಮತ್ತು ಕೋಲ್ಕತ್ತಾದಿಂದ ಎರಡು ದೈನಂದಿನ ಸೇವೆಗಳನ್ನು ನಿರ್ವಹಿಸುತ್ತದೆ.

RELATED ARTICLES

Latest News