ನೆರೆರಾಷ್ಟ್ರ ಬಾಂಗ್ಲಾದಲ್ಲಿ ಒಂದು ವಾರ ಕಂಪ್ಲೀಟ್ ಲಾಕ್‍ಡೌನ್ ಘೋಷಣೆ..!

ಢಾಕಾ, ಏ.5- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದಲ್ಲಿ 7 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಇಂದು ಬೆಳಗ್ಗೆ 6ಗಂಟೆಯಿಂದ ಏ.11ರ ಮಧ್ಯರಾತ್ರಿ 12ಗಂಟೆವರೆಗೂ ಲಾಕ್‍ಡೌನ್ ಜಾರಿಯಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸೋಂಕು ಹರಡುವುದನ್ನು ತಡೆಗಟ್ಟುವುದು ಮತ್ತು ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ ಎಂದು ಬಾಂಗ್ಲಾ ಸರ್ಕಾರ ತಿಳಿಸಿದೆ. ಹೊಸದಾಗಿ 7087 ಮಂದಿಗೆ ಸೋಂಕು ತಗುಲಿದ್ದು, ಒಟ್ಟು 6,37ಸಾವಿರ ಮಂದಿ ಸೋಂಕಿತರಿದ್ದಾರೆ.

53 ಮಂದಿ ಹೊಸದಾಗಿ ಸಾವನ್ನಪ್ಪಿದ್ದು, ಈವರೆಗೂ 9266 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬಾಂಗ್ಲಾದೇಶ ಲಾಕ್‍ಡೌನ್ ಘೋಷಣೆ ಮಾಡಿದೆ. ಕಳೆದ ವರ್ಷ ಮಾರ್ಚ್ 26ರಿಂದ ಮೇ 30ರವರೆಗೆ 66 ದಿನಗಳ ಲಾಕ್‍ಡೌನ್ ಫೋಷಣೆ ಮಾಡಲಾಗಿತ್ತು.