ಶದ್ದಾ ಕೊಲೆ ಮಾದರಿಯಲ್ಲೇ ಬಾಂಗ್ಲಾದಲ್ಲೂ ಪ್ರೇಯಸಿಯ ಭೀಕರ ಹತ್ಯೆ

Social Share

ಡಾಕಾ.ನ.18- ಭಾರತದ ನವದೆಹಲಿಯಲ್ಲಿ ನಡೆದಿದ್ದ ಶದ್ದಾ ಭೀಕರ ಕೊಲೆ ರೀತಿಯಲ್ಲಿ ಬಾಂಗ್ಲಾದೇಶದಲ್ಲೂ ಇದೇ ರೀತಿ ಪ್ರೇಯಸಿಯನ್ನು ತುಂಡಾಗಿ ಕತ್ತರಿಸಿ ಬಿಸಾಡಿದ್ದ ರಾಕ್ಷಸಿ ಘಟನೆ ನಡೆದಿದೆ. ಇಲ್ಲೂ ಕೂಡ ಹಿಂದೂ ಯುವತಿ ಕವಿತಾ ರಾಣಿ ಬಲಿಯಾಗಿದ್ದಾಳೆ. ಪಾಪಿ ಅಬು ಬಕರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಅಬು ಬಕರ್‍ನ ಮೊಹಕನಾಟಕ್ಕೆ ಕವಿತಾ ರಾಣಿ ಬಿದ್ದಿದ್ದರು ಒಟ್ಟಿಗೆ ಸಾರಿಗೆ ಕಾರ್ಖಾನೆಯಲ್ಲಿ ಕೆಲಸಮಾಡುತ್ತಾ ಇಬ್ಬರು ಪ್ರೀತಿಸುತ್ತಿದ್ದರು , ಆದರೆ ಕಳೆದ ನಾಲ್ಕು ವರ್ಷಗಳಿಂದ ಗೋಬಚಾರಕ ಪ್ರದೇಶದ ಮನೆಯೊಂದರಲ್ಲಿ ಕಳೆದ 4 ವರ್ಷದಿಂದ ಕವಿತಾ ಎಂಬ ಮೊತ್ತಬ್ಬ ಹಿಂದೂ ಯುವತಿ ಪುಸಲಾಯಿಸಿ ಪ್ರೇಮ ಬಲೆಗೆ ಬೀಳಿಸಿಕೊಂಡಿದ್ದ.ಲವ್ ಇನ್ ರಿಲೇಷನ್ ನಡೆಸುತ್ತಿದ್ದ.

ಇದು ಹೇಗೂ ಕವಿತಾ ರಾಣಿಗೆ ಗೊತ್ತಾಗಿ ಬೇಸರಗೊಂಡಿದ್ದಳು. ಕಳೆದ ನವೆಂಬರ್ 5 ರಂದು ಸಪ್ನಾ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕವಿತಾಳನ್ನು ಅಬು ಬಕರ್ ತನ್ನ ಬಾಡಿಗೆ ಮನೆಗೆ ಆಹ್ವಾನಿಸಿದ್ದ. ಅಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಮತದಾರರ ಮಾಹಿತಿಗೆ ಕನ್ನ : ಚಿಲುಮೆ ಸಂಸ್ಥೆ ಲೋಕೇಶನಿಗೆ ಪೊಲೀಸರ ಗ್ರಿಲ್

ನಂತರ ಅಬು ಬಕರ್ ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಕೈಗಳನ್ನು ಕತ್ತರಿಸಿ ಚರಂಡಿಗೆ ಎಸೆದು, ದೇಹದಿಂದ ತಲೆಯನ್ನು ಕತ್ತರಿಸಿ ಬೇರ್ಪಡಿಸಿ ಪಾಲಿಥಿನ್ ಚೀಲದಲ್ಲಿ ಸುತ್ತಿ ಇಟ್ಟಿದ್ದ ಉಳಿದ ದೇಹವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಅಬು ಬಕರ್ ಕೆಲಸಕ್ಕೆ ಹಾಜರಾಗಲಿಲ್ಲ ಮತ್ತು ಫೋನ್‍ನಲ್ಲಿ ಸಂಪರ್ಕಿಸಲಾಗಲಿಲ್ಲ.

2025ರ ಜೂನ್ ವೇಳೆಗೆ 175 ಕಿ.ಮೀ. ಮೆಟ್ರೋ ಮಾರ್ಗ ಸಿದ್ಧ

ನಂತರ ಅಬುಬಕರ್ ನಾಪತ್ತೆಯಾಗಿರುವ ಬಗ್ಗೆ ಅನುಮಾನ ಹೆಚ್ಚಾಗುತ್ತಿದ್ದಂತೆ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲನ್ನು ತೆರೆದಾಗ ಪೆಟ್ಟಿಗೆಯಲ್ಲಿ ಮಹಿಳೆಯ ತಲೆಯಿಲ್ಲದ ಶವ ಪತ್ತೆಯಾಗಿದೆ.

ಮನೆಯಲ್ಲಾ ಹುಡುಕಾಟ ಮಾಡಿದಾಗ ಆಕೆಯ ತಲೆಯನ್ನು ಪಾಲಿಥಿನ್‍ನಲ್ಲಿ ಸುತ್ತಿ ಪ್ರತ್ಯೇಕವಾಗಿ ಮೂಲೆಯಲ್ಲಿ ಇರುವುದು ಕಂಡಿದೆ. ನಂತರ ಕೊಲೆಯಾದ ಯುವತಿಯನ್ನು ಕಾಳಿಪಾಡ್ ಬಾಚಾರ್ ಎಂಬವರ ಪುತ್ರಿ ಕವಿತಾ ರಾಣಿ ಎಂದು ತಿಳಿದುಬಂತು.

ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಜೆಡಿಎಸ್, ಚುನಾವಣಾ ಪ್ರಚಾರ ಆರಂಭ

ತಲೆ ಮರೆಸಿಕೊಂಡಿದ್ದ ಅಬು ಬಕರ್ ಮತ್ತು ಸಪ್ನಾ ಅವರನ್ನು ಬಾಂಗ್ಲಾದೇಶದ ರಾಪಿಡ್ ಆಕ್ಷನ್ ಬೆಟಾಲಿಯನ್ ಅಧಿಕಾರಿಗಳು ಬಂಧಿಸಿದ್ದಾರೆ..

Bangladesh, Muslim, man, Hindu, girlfriend, murder, Abu Bakar,

Articles You Might Like

Share This Article