15 ವರ್ಷದ ಹಿಂದೆಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಮಹಿಳೆ ಅರೆಸ್ಟ್

Social Share

ಬೆಂಗಳೂರು, ಜ.27- ಬಾಂಗ್ಲಾ ದೇಶದಿಂದ ಹದಿನೈದು ವರ್ಷದ ಹಿಂದೆ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಭಾರತ ಪ್ರಜೆಯಂತೆ ಪಾಸ್ ಫೋರ್ಟ್ ಮಾಡಿಸಿಕೊಂಡು 2006-07ರಲ್ಲಿ ಬಾಂಗ್ಲಾದೇಶದ ಮುಸ್ಲಿಂ ಮಹಿಳೆ ಹಿಂದೂ ಹೆಸರಿಟ್ಟುಕೊಂಡು ಭಾರತಕಕೆ ಬಂದಿದ್ದಾಳೆ.
ಭಾರತ ದೇಶದಲ್ಲಿ ಬಾಂಗ್ಲಾ ನುಸುಳುಕೋರರು ಹೆಚ್ಚಾಗಿ ನೆಲೆಸಿದ್ದಾರೆಂಬ ಮಾಹಿತಿ ಮೇರೆಗೆ ಅವರುಗಳನ್ನು ಪತ್ತೆ ಹಚ್ಚಲು ಸರ್ಕಾರ ವಿಶೇಷ ಕ್ಯಾರ್ಯಾಚರಣೆ ನಡೆಸುತ್ತಿದೆ. ಇದೀಗ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಾಂಗ್ಲಾದೇಶದ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
2006-07ರಲ್ಲಿ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಮಹಿಳೆ ರೋನಿ ಬೇಗಂ ಮುಂಬೈನಲ್ಲಿ ನೆಲೆಸಿದ್ದಳು. ಅಲ್ಲಿನ ಡ್ಯಾನ್ಸ್ ಬಾರ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈಕೆ ತನ್ನ ಹೆಸರನ್ನು ಪಾಯಿಲ್ ಘೋಷ ಎಂದು ಬದಲಿಸಿಕೊಂಡು, ತಾನು ಭಾರತೀಯ ಮಹಿಳೆ ಎಂಬಂತೆ ಬಿಂಬಿಸಿಕೊಂಡು ನೆಲೆಸಿದ್ದಳು.
ಆ ಸಂದರ್ಭದಲ್ಲಿ ಮಂಗಳೂರು ಮೂಲದ ನಿತಿನ್ ಎಂಬ ಯುವಕನ ಪರಿಚಯವಾಗಿದೆ. ನಂತರ ಸೇಹ ಕ್ರಮೇಣ ಪ್ರೀತಿಗೆ ತಿರುಗಿ 2015ರಲ್ಲಿ ಇವರಿಬ್ಬರೂ ಬೆಂಗಳೂರಿಗೆ ಬಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದರು.
ಜ.9, 2020ರಲ್ಲಿ ಪಶ್ಚಿಮ ಬಂಗಾಳ ಏರ್‍ಪೆಪೊರ್ಟ್‍ಗೆ ಈಕೆ ಹೋಗಿದ್ದಾಗ ಇಮಿಗ್ರೇಷನ್ ಅಕಾರಿಗಳು ಪಾಸ್ ಪೊರ್ಟ್ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾಗ ಈ ಮಹಿಳೆ ಗೊಂದಲದ ಹೇಳಿಕೆ ನೀಡಿದ್ದಾಳೆ. ಈ ಮಹಿಳೆಯ ವರ್ತನೆ ಬಗ್ಗೆ ಅನುಮಾನಗೊಂಡ ಇಮಿಗ್ರೇಷನ್ ಅಕಾರಿಗಳು ಏರ್‍ಪೊರ್ಟ್‍ನಿಂದ ಆಕೆಯನ್ನು ವಾಪಸ್ ಕಳುಹಿಸಿದ್ದಾರೆ.
ನಂತರ ಇಮಿಗ್ರೇಷನ್ ಅಕಾರಿಗಳು ಬೆಂಗಳೂರು ಎಫ್‍ಆರ್‍ಆರ್‍ಒ ಅಕಾರಿಗಳ ಗಮನಕ್ಕೆ ತಂದಿದ್ದಾರೆ. ಎಫ್‍ಆರ್‍ಆರ್‍ಒ ಅಧಿಕಾರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಮಹಿಳೆಯ ಚಲನವಲನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಗರ ಪೊಲೀಸ್ ಆಯುಕ್ತರು ಬ್ಯಾಡರಹಳ್ಳಿ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ.
ಬ್ಯಾಡರಹಳ್ಳಿ ಠಾಣೆ ಪೊಲೀಸರು ವಿವಿಧ ಜಿಲ್ಲೆಗಳಿಗೆ ತೆರಳಿ ಈ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಅಪರಾಧ ಕೃತ್ಯಗಳಲ್ಲಿ ಈಕೆ ಬಾಗಿಯಾಗಿದ್ದಾಳೆಯೇ ಎಂ ಬ ಬಗ್ಗೆಯೂ ತನಿಖೆ ಕೈಗೊಂಡಿದ್ದರು. ಬಾಂಗ್ಲಾದೇಶದಿಂದ ಈ ಮಹಿಳೆ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಬಗ್ಗೆ ಇನ್ಸ್‍ಪೆಕ್ಟರ್ ರವಿಕುಮಾರ್ ಮತ್ತು ಸಬ್ ಇನ್ಸ್‍ಪೆಕ್ಟರ್ ನವೀನ್ ಪ್ರಸಾದ್ ಬಂಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಮಹಿಳೆ ಭಾರತಕ್ಕೆ ಬಂದ ನಂತರದಲ್ಲಿ ಯಾವ ಯಾವ ಸ್ಥಳಗಳಿಗೆ ಹೋಗಿದ್ದಾಳೆ, ಯಾರ್ಯಾ ರನ್ನು ಸಂಪರ್ಕಿಸಿದ್ದಾಳೆ, ಈಕೆಯ ಪರಿಚಯದವರನ್ನು ಸಹ ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿ ದ್ದಾರೆ. ಭಾರತಕ್ಕೆ ಬರಲು ನಕಲಿ ದಾಖಲೆಗಳನ್ನು ಮಾಡಿಕೊಟ್ಟಿರುವವರಿಗಾಗಿಯೂ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Articles You Might Like

Share This Article