ವಿದ್ಯಾರ್ಥಿಗಳನ್ನು ರಕ್ಷಿಸಿದ ಭಾರತದ ನೆರವಿಗೆ ಬಾಂಗ್ಲಾ ಶ್ಲಾಘನೆ

Social Share

ಡಾಕಾ,ಸೆ.3- ರಷ್ಯಾ-ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಪೂರ್ವ ಯೂರೋಪ್‍ನಲ್ಲಿ ಸಿಲುಕಿದ್ದ ಬಾಂಗ್ಲಾ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ನೆರವು ಅಮೋಘವಾದದ್ದು ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಶ್ಲಾಘಿಸಿದ್ದಾರೆ.

ನಾಳೆ ಭಾರತಕ್ಕೆ ಭೇಟಿ ನೀಡುತ್ತಿರುವ ಹಸೀನಾ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋದಿ ಅವರ ಗುಣಗಾನ ಮಾಡಿದ್ದಾರೆ. ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ ಜೊತೆಗೆ ಕೊರೊನಾ ಸೋಂಕು ತೀವ್ರಗೊಂಡಿದ್ದ ಸಂದರ್ಭದಲ್ಲೂ ಭಾರತ ನಮ್ಮ ದೇಶಕ್ಕೆ ಉಚಿತ ಲಸಿಕೆ ನೀಡಿ ಮಾನವಿಯತೆ ಮೆರೆದಿದೆ ಎಂದು ಅವರು ಕೊಂಡಾಡಿದ್ದಾರೆ.

ಹೀಗಾಗಿ ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಚ್ಚಿಸಿದ್ದೇವೆ ಹಾಗೂ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ಹಸೀನಾ ಹೇಳಿದ್ದಾರೆ. ಭಾರತ ಸರ್ಕಾರದ ಲಸಿಕೆ ಮೈತ್ರಿ ಕಾರ್ಯಕ್ರಮದ ಅತ್ಯಂತ ವಿವೇಕಯುತ ಉಪಕ್ರಮ ಎಂದು ಅವರು ಪ್ರಶಂಸಿದ್ದಾರೆ.

ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಕೆಲವು ದಕ್ಷಿಣ ಏಷ್ಯಾದ ದೇಶಗಳಿಗೂ ಲಸಿಕೆಗಳನ್ನು ಕೊಡುಗೆ ನೀಡಿದ್ದಾರೆ, ಮತ್ತು ಇದು ನಿಜವಾಗಿಯೂ ತುಂಬಾ ಸಹಾಯಕವಾಗಿದೆ. ಮತ್ತು ಇದು ನಿಜವಾಗಿಯೂ ವಿವೇಕಯುತ ಉಪಕ್ರಮವಾಗಿದೆ.

ಬಾಂಗ್ಲಾದೇಶವು ತನ್ನ ಜನಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಿದೆ. ಸಾಮಾನ್ಯವಾಗಿ, ನಿಮಗೆ ಗೊತ್ತಾ, ನಮ್ಮ ದೇಶದ ಜನರು, ವಿಶೇಷವಾಗಿ ಗ್ರಾಮ ಮಟ್ಟದ ಜನರು, ಕೆಲವು ಪಟ್ಟಣಗಳಲ್ಲಿಯೂ ಸಹ, ನಾನು ಅನೇಕ ಜನರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರೂ ಅವರ ಮನವೊಲಿಸಿ ಲಸಿಕೆ ನೀಡಲು ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.

ನಮ್ಮ ಲಸಿಕಾ ಯಶಸ್ಸಿನ ಹಿಂದೆ ಭಾರತ ಸರ್ಕಾರದ ಸಹಕಾರವಿದೆ ಎನ್ನುವುದನ್ನು ನಾವು ಯಾವತ್ತು ಮರೆಯುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Articles You Might Like

Share This Article