ನವದೆಹಲಿ, ಆ.1- ಆರು ವಾರಾಂತ್ಯಗಳನ್ನು ಹೊರತುಪಡಿಸಿ ಆಗಸ್ಟ್ ತಿಂಗಳಲ್ಲಿ 12 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ. ರಕ್ಷಾ ಬಂಧನ, ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯ ದಿನ ಸೇರಿದಂತೆ ಹಬ್ಬಗಳು, ರಾಷ್ಟ್ರೀಯ ಅಥವಾ ಪ್ರಾದೇಶಿಕ ಹಬ್ಬಗಳು ಮತ್ತು ವಿಶೇಷ ಆಚರಣೆಯ ದಿನಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳು ಈ ದಿನಗಳಲ್ಲಿ ರಜೆಯಲ್ಲಿರುತ್ತವೆ.
ಆಗಸ್ಟ್ 1ರಂದು ದ್ರುಕ್ಪಾ ತ್ಶೆ-ಜಿ – ಗ್ಯಾಂಗ್ಟಾಕ್, ಆಗಸ್ಟ್ 8ರಂದು ಮೊಹರಂ( ಅಶೂರ್) ಹಿನ್ನಲೆಯಲ್ಲಿ ಜಮ್ಮು, ಶ್ರೀನಗರದಲ್ಲಿ ಮತ್ತು ಆಗಸ್ಟ್ 9- ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ್ ಮತ್ತು ರಾಂಚಿಯ ಬ್ಯಾಂಕ್‍ಗಳಲ್ಲಿ ರಜೆ ಇರುತ್ತದೆ.
ಆಗಸ್ಟ್ 11 ರಕ್ಷಾ ಬಂಧನ – ಅಹಮದಾಬಾದ್, ಭೋಪಾಲ್, ಡೆಹ್ರಾಡೂನ್, ಜೈಪುರ ಮತ್ತು ಶಿಮ್ಲಾದಲ್ಲಿ ರಜೆ ಇರುತ್ತದೆ. ಆಗಸ್ಟ್ 12 ರಕ್ಷಾ ಬಂಧನದ ಅಂಗವಾಗಿ ಕಾನ್ಪುರ, ಮತ್ತು ಲಕ್ನೋ, ರಜೆ ಇದ್ದರೆ ಆಗಸ್ಟ್ 13 ದೇಶಪ್ರೇಮಿಗಳ ದಿನದ ಅಂಗವಾಗಿ ಇಂಫಾಲ್‍ನಲ್ಲಿ ರಜೆ ಇರುತ್ತದೆ.
ಆಗಸ್ಟ್ 15: ಸ್ವಾತಂತ್ರ್ಯ ದಿನ – ಭಾರತದಾದ್ಯಂತ ರಜೆ ಇದ್ದರೆ, ಆಗಸ್ಟ್ 16 ಪಾರ್ಸಿ ಹೊಸ ವರ್ಷ (ಶಾಹೆನ್‍ಶಾಹಿ)ದ ಹಿನ್ನೆಲೆಯಲ್ಲಿ ಬೇಲಾಪುರ್, ಮುಂಬೈ ಮತ್ತು ನಾಗ್ಪುರದ ಬ್ಯಾಂಕ್‍ಗಳು ರಜೆ ಇರುತ್ತದೆ.
ಆಗಸ್ಟ್ 18 ಜನ್ಮಾಷ್ಟಮಿ ಪ್ರಯುಕ್ತ ಭುವನೇಶ್ವರ್, ಡೆಹ್ರಾಡೂನ್, ಕಾನ್ಪುರ್ ಮತ್ತು ಲಕ್ನೋದಲ್ಲಿ ಹಾಗೂ ಆಗಸ್ಟ್ 19ರಂದು ಜನ್ಮಾಷ್ಟಮಿ (ಶ್ರಾವಣ ವಧ-8) ಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್ ಮತ್ತು ಶಿಮ್ಲಾದಲ್ಲಿ ರಜಾ ದಿನವಾಗಿರುತ್ತದೆ.
ಆಗಸ್ಟ್ 20 ಶ್ರೀ ಕೃಷ್ಣ ಅಷ್ಟಮಿ – ಹೈದರಾಬಾದ್‍ನಲ್ಲಿ, ಆಗಸ್ಟ್ 29 ಶ್ರೀಮಂತ ಶಂಕರದೇವನ ಪುಣ್ಯಸ್ಮರಣೆ ನಿಮಿತ್ತ ಗುವಾಹಟಿಯಲ್ಲಿ ರಜೆ ಇದ್ದರೆ, ಆಗಸ್ಟ್ 31 ಸಂವತ್ಸರಿ (ಚತುರ್ಥಿ ಪಕ್ಷ)ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿ ನಗರದ ಬ್ಯಾಂಕ್‍ಗಳು ರಜೆಯಲ್ಲಿರುತ್ತವೆ.
ಇನ್ನು ಉಳಿದಂತೆ ವಾರಾಂತ್ಯದ ರಜೆ ಪಟ್ಟಿಯಲ್ಲಿ ಆಗಸ್ಟ್ 7 ಮೊದಲ ಭಾನುವಾರ, ಆಗಸ್ಟ್ 13 ಎರಡನೇ ಶನಿವಾರ + ದೇಶಪ್ರೇಮಿಗಳ ದಿನ, ಆಗಸ್ಟ್ 14 ಎರಡನೇ ಭಾನುವಾರ, ಆಗಸ್ಟ್ 21 ಮೂರನೇ ಭಾನುವಾರ, ಆಗಸ್ಟ್ 27 ನಾಲ್ಕನೇ ಶನಿವಾರ ಹಾಗೂ ಆಗಸ್ಟ್ 28 ನಾಲ್ಕನೇ ಭಾನುವಾರವಾಗಿರುವುದರಿಂದ ಸಹಜವಾಗಿ ಬ್ಯಾಂಕ್‍ಗಳಿಗೆ ರಜೆ ಇರುತ್ತದೆ.