ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹರಿ ನಿಧನ

Social Share

ಮುಂಬೈಫೆ.16: ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹರಿ ಇಂದು ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಪ್ಪಿದ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಸಂಗೀತಗಾರನಿಗೆ 69 ವರ್ಷ ವಯಸ್ಸಾಗಿತ್ತು. ಮಂಗಳವಾರ ರಾತ್ರಿ ಬಪ್ಪಿ ಲಹರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ಜುಹುವಿನ ಕ್ರಿಟಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ವೈದ್ಯರು ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಬಪ್ಪಿ ಲಹರಿ ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷವಷ್ಟೇ ಕೊರೋನಾದ ಸೌಮ್ಯ ಲಕ್ಷಣಗಳು ಅವರಲ್ಲಿ ಕಂಡು ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು.
ಬಪ್ಪಿ ಲಹರಿ ಬಾಲಿವುಡ್‌ಗೆ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ನಿಜವಾದ ಹೆಸರು ಅಲೋಕೇಶ್ ಲಾಹಿರಿ. 27 ನವೆಂಬರ್ 1952 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಬಪ್ಪಿದ ಅವರ ತಂದೆಯ ಹೆಸರು ಅಪರೇಶ್ ಲಹರಿ ಮತ್ತು ತಾಯಿಯ ಹೆಸರು ಬನ್ಸಾರಿ ಲಹರಿ.

Articles You Might Like

Share This Article