ಬಪ್ಪಿ ನಿಧನಕ್ಕೆ ಬಚ್ಚನ್ ಕಂಬನಿ

Social Share

ಮುಂಬೈ,ಫೆ.17- ತಮ್ಮ ಚಿತ್ರಗಳಿಗೆ ಇಂಪಾದ ಗೀತೆಗಳನ್ನು ಸಂಯೋಜಿಸಿ ಜನಪ್ರಿಯಗೊಳಿಸಿದ ಬಪ್ಪಿ ಲಹಿರಿ ಅವರ ನಿಧನಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಸಿನಿಮಾಗಳಿಗೆ ಬಪ್ಪಿ ಅವರು ನೀಡಿರುವ ಗೀತೆಗಳು ದಶಕಗಳಾಚೆಗೂ ಸಂತೋಷದಿಂದ ನೆನಪಿನಂಗಳದಲ್ಲಿರುತ್ತವೆ ಎಂದು ಅಮಿತಾಭ್ ಹೇಳಿದ್ದಾರೆ.
ನಗರದ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದ 69 ವರ್ಷ ವಯಸ್ಸಿನ ಬಪ್ಪಿ ಲಹರಿ ಅವರು ನಮಕ್‍ಹಲಾಲ್ (1982) ಮತ್ತು ಶರಾಬಿ (1984) ಮೊದಲಾದ ಅಮಿತಾಭ್ ನಟನೆಯ ಚಿತ್ರಗಳಿಗೆ ಹಿಟ್ ಗೀತೆಗಳನ್ನು ನೀಡಿದ್ದರು.
ಅವರ ಸಂಗೀತ ಸಂಯೋಜನೆಯ ಹಿಟ್ ಗೀತೆಗಳಲ್ಲಿ ಪಗ್ ಘುಂಗ್ರೂ ಬಂಧ್, ಥೋಡೀ ಸೀ ಜೋ ಪೀಲಿ ಹೈ, ಆಜ್ ರಪಟ್ ಜಾಯೇ ತೋ, ಜಹಾ ಚಾರ್ ಯಾರ್, ದೇ ದೇ ಪ್ಯಾರ್ ದೇ, ಇಂತೆಹಾ ಹೋ ಗಯೀ ಇಂತೆಝಾರ್ ಕೀ ಮತ್ತು ರಾತ್ ಬಾಕಿ, ಬಾತ್ ಬಾಕಿ ಗೀತೆಗಳು ಸೇರಿವೆ.
79 ವರ್ಷ ವಯಸ್ಸಿನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್‍ನಲ್ಲಿ ಬಪ್ಪಿ ಲಹರಿ ಅವರನ್ನು ಸ್ಮರಿಸಿಕೊಂಡಿದ್ದಾರೆ. ಬಪ್ಪಿ ಅವರ ಅಗಲಿಕೆ ತಮಗೆ ಆಘಾತ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಅಮಿತಾಭ್ ತಿಳಿಸಿದ್ದಾರೆ.

Articles You Might Like

Share This Article