ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

Social Share

ಬೆಂಗಳೂರು, ನ.20- ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರ ಹರಿದು ಬರುತ್ತಿದೆ. ಈ ಬಾರಿ ಕಡಲೆಕಾಯಿ ಪರಿಷೆಗೆ ಸೋಮವಾರದ ಬದಲಿಗೆ ಇಂದು ಸಂಜೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು,

ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿನ್ನೆಯಿಂದಲೇ ಪರಿಷೆ ಕಳೆಗಟ್ಟಿದ್ದು, ರಜಾ ದಿನವಾದ ಇಂದು ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಡವರ ಬಾದಾಮಿಯನ್ನು ಖರೀದಿಸಿ ಸವಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ರಾಶಿ ರಾಶಿ ಕಡಲೆಕಾಯಿ ಮಾರಾಟದಲ್ಲಿ ತೊಡಗಿದ್ದ ದೃಶ್ಯ ಒಂದು ಕಡೆ ಕಂಡು ಬಂದರೆ ಮತ್ತೊಂದೆಡೆ ಮಕ್ಕಳು ಆಟದಲ್ಲಿ ತೊಡಗಿದ್ದರು.

5 ವರ್ಷಗಳ ನಂತರ ಚೇತೇಶ್ವರ್ ಪೂಜಾರಗೆ ಅರ್ಜುನ ಪ್ರಶಸ್ತಿ ಪ್ರದಾನ

ಇನ್ನು ಯುವತಿಯರ ಅಲಂಕಾರಿಕ ಆರ್ಟಿಫಿಷಿಯಲ್ ಆಭರಣಗಳಗಳತ್ತ ಯುವತಿಯರು ಹಾಗೂ ಮಹಿಳೆಯರು ಕಣ್ಣು ಹಾಯಿಸಿ ಖರೀದಿಯಲ್ಲಿ ಬ್ಯುಸಿಯಾಗಿದ್ದ ದೃಶ್ಯಗಳು ಕಂಡು ಬಂದವು. ಬೆಂಗಳೂರಿನ ಜನರು ಮಾತ್ರವಲ್ಲದೆ ವಿದೇಶಿ ಪ್ರವಾಸಿ ಗರು ಐತಿಹಾಸಿಕ ಪರಿಷೆಗೆ ಬಂದು ಬಸವನಿಗೆ ನಮಸ್ಕರಿಸಿ ನಮ್ಮ ಉದ್ಯಾನ ನಗರಿಯ ಸಂಸ್ಕøತಿ ಪರಂಪರೆಯ ಬಗ್ಗೆ ಮಾಹಿತಿ ಪಡೆದು ಪೋಟೋಗಳನ್ನು ತೆಗೆದುಕೊಂಡು ಅವರೂ ಸಹ ಕಡಲೆಕಾಯಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಳೆ ತೆಪ್ಪೋತ್ಸವ
ಇಂದು ಸಂಜೆ ಪರಿಷೆಗೆ ಚಾಲನೆ ದೊರೆಯಲಿದ್ದು, ನಾಳೆ ಸಂಜೆ ಕೆಂಪಾಂಬುದಿ ಕೆರೆಯಲ್ಲಿ ಸಾಂಪ್ರಾದಾಯಿಕ ತೆಪ್ಪೋತ್ಸವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವೋಟರ್ ಐಡಿ ಹಗರಣ ಕಾಂಗ್ರೆಸ್‍ನವರಿಗೇ ತಿರುಗುಬಾಣವಾಗುತ್ತೆ : ಬೊಮ್ಮಾಯಿ

ಸಾಂಸ್ಕøತಿಕ ಕಾರ್ಯಕ್ರಮ
ಬ್ಯುಗಲ್ ರಾಕ್ ಉದ್ಯಾನವನ ಮತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಇಂದಿನಿಂದ 22ರ ವರೆಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ಎರಡು ಸಾವಿರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳ ಹಿತದೃಷ್ಟಿಯಿಂದ ಸಿಸಿ ಕ್ಯಾಮೆರಾ ಹಾಗೂ ದೇವರ ದರ್ಶನಕ್ಕಾಗಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ವೋಟರ್ ಐಡಿ ಹಗರಣ : ಸಾಫ್ಟ್ ವೇರ್ ಎಂಜಿನಿಯರ್ ವಶಕ್ಕೆ

Basavanagudi, Kadalekai, Parishe, 2022,

Articles You Might Like

Share This Article