ನಾವೇನು ಸನ್ಯಾಸಿಗಳಲ್ಲ, ನಮಗೆ ಸಭಾಪತಿ ಸ್ಥಾನ ಕೊಡಬೇಕು : ಹೊರಟ್ಟಿ

Spread the love

ಬೆಂಗಳೂರು,ಜ.20-ರಾಜ್ಯ ವಿಧಾನಪರಿಷತ್‍ನ ಸಭಾಪತಿ ಸ್ಥಾನವನ್ನು ನಮಗೆ ಕೊಡಬೇಕು. ನಾವೇನು ಸನ್ಯಾಸಿಗಳಲ್ಲ ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಭಾಪತಿಯಾಗಬೇಕು ಎಂಬುದರ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆಯಿದೆ.

ವಿಧಾನಪರಿಷತ್‍ನ ಸಭಾಪತಿ ವಿರುದ್ಧದ ಬಿಜೆಪಿಯ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇಟ್ಟುಕೊಂಡಿದ್ದೇವೆ. ನಮ್ಮ ಪಕ್ಷದ ವರಿಷ್ಠರು ಸೂಚಿಸಿದ ತಕ್ಷಣವೇ ವಿಧಾನಪರಿಷತ್ ಕಾರ್ಯದರ್ಶಿಗೆ ಅದನ್ನು ತಲುಪಿಸುತ್ತೇವೆ ಎಂದರು.

ಬಿಜೆಪಿಯ 31 ಮಂದಿ ಸದಸ್ಯರು ಮೇಲ್ಮನೆಯಲ್ಲಿದ್ದರೆ ನಾವು 14 ಸದಸ್ಯರಿದ್ದೇವೆ. ಅವರು ಸಭಾಪತಿ ಸ್ಥಾನವನ್ನು ನಮಗೆ ಬಿಟ್ಟುಕೊಡಿ ಎಂದು ಕೇಳಬಹುದು. ಅವರಲ್ಲೂ ಸಭಾಪತಿ ಸ್ಥಾನದ ಆಕಾಂಕ್ಷಿಗಳಿರಬಹುದು. ಏನೇ ಮಾಡಬೇಕಿದ್ದರೂ ನಮ್ಮ ಬೆಂಬಲ ಬೇಕಲ್ಲವೇ ಎಂದು ಪ್ರಶ್ನಿಸಿದರು.

ಹೀಗಾಗಿ ಸಭಾಪತಿ ಸ್ಥಾನ ಜೆಡಿಎಸ್‍ಗೆ ಸಿಗಲಿದೆ. ಈಗಾಗಲೇ ದೇವೇಗೌಡರು ನನ್ನನ್ನು ಸಭಾಪತಿ ಮಾಡುವ ತೀರ್ಮಾನ ಮಾಡಿದ್ದಾರೆ. ಈ ವಿಚಾರ ಚರ್ಚಿಸಿದ ನಂತರವೇ ತೀರ್ಮಾನ ಆಗಬೇಕಿದೆ ಎಂದು ಹೇಳಿದರು.

Facebook Comments

Sri Raghav

Admin