ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಕಡ್ಡಾಯವಾಗಿ ಹಾಜರಿರಬೇಕು : ಸಭಾಪತಿ ಸೂಚನೆ

Spread the love

ಬೆಂಗಳೂರು,ಮಾ.5- ಪ್ರಶ್ನೋತ್ತರ ಅವಯಲ್ಲಿ ಕಡ್ಡಾಯವಾಗಿ ಸಚಿವರು ಹಾಜರಿರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸಂಬಂಧಪಟ್ಟ ಸಚಿವರಿಲ್ಲ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಕ್ಷೇಪಿಸಿದಾಗ ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿಯವರು, ಪೂರ್ವ ನಿಯೋಜಿತ ಕಾರ್ಯಕ್ರಮವೆಂದು ಪತ್ರ ನೀಡಿ ಹೋಗಬಾರದು.

ವಿಧಾನಸಭೆಯಲ್ಲಿ ಹಾಜರಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಸಚಿವರು ಈ ಸನದಲ್ಲಿ ಹಾಜರಿರಲೇಬೇಕು ಎಂದು ಹೇಳಿ, ಈ ಬಗ್ಗೆ ಗಮನಹರಿಸುವಂತೆ ಸಭಾನಾಯಾಕರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದರು.

ಪ್ರಶ್ನೋತ್ತರ ವೇಳೆ ಪ್ರಾರಂಭವಾಗುತ್ತಿದ್ದಂತೆ ಸಚಿವರಿಲ್ಲದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿ ಬರಬೇಕೆಂದು ನಿನ್ನೆ ಹೇಳಿದ್ದೀರಿ. ಇಂದು ಈ ರೀತಿಯಾದರೆ ಏನು ಮಾಡುವುದು. ಕಡ್ಡಾಯವಾಗಿ ಹಾಜರಾಗಬೇಕಾದ ಸಚಿವರು ಕೆಳಮನೆಗೂ ಬಂದಿಲ್ಲ. ಇಲ್ಲಿಗೂ ಬರುವುದಿಲ್ಲ. ಯಾವ ಪುರುಷಾರ್ಥಕ್ಕಾಗಿ ಸದನ ನಡೆಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕರು ಸಚಿವರು ಕೆಳಮನೆಯಲ್ಲೂ ಇರಬೇಕಾಗುತ್ತದೆ. ಆದರೆ ಕೆಳಮನೆಯಲ್ಲೂ ಸಚಿವರು ಉತ್ತರಿಸಬೇಕಾದ ಸಂದರ್ಭದಲ್ಲಿ ಇಲ್ಲಿ ಇರಲು ಸಾಧ್ಯವಾಗುವುದಿಲ್ಲ. ಕನಿಷ್ಠ 3 ಸಚಿವರಾದರೂ ಇರಬೇಕು. ಆದರೆ ನಾವು ಆರು ಸಚಿವರು ಇದ್ದೇವೆ.

ಒಬ್ಬ ಸಚಿವರ ಬದಲು ಇನ್ನೊಬ್ಬ ಸಚಿವರು ಉತ್ತರಿಸಬಹುದು ಎಂದು ಸಮಾಜಾಯಿಷಿ ನೀಡಿದರು.  ಪ್ರಶ್ನೆಯೊಂದು ವರ್ಗಾವಣೆ ಆಗಿದೆ ಎಂದು ಹೇಳಿದಾಗಲೂ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Facebook Comments

Sri Raghav

Admin