ಹುಬ್ಬಳ್ಳಿ,ನ.28- ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರ ಪುಂಡಾಟಿಕೆ ಹೆಚ್ಚಾಗಿದ್ದು ಇದಕ್ಕೆ ಶಾಸಕರು ಸಂಸದರು ವೋಟ್ಗಾಗಿ ಸುಮ್ಮನಿರ್ತಾರೆ ಎಂದು ಸರ್ಕಾರದ ವಿರುದ್ಧವೇ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿರೋ ಎಂಇಎಸ್ ಸಂಘಟನೆ ಕಾರ್ಯಕರ್ತರನ್ನು ಒದ್ದು ಒಳಗೆ ಹಾಕಬೇಕು ಎಂದ ಅವರು ಎಂಇಎಸ್ ನವರು ಇಲ್ಲಿಯ ಅನ್ನ ಉಂಡು ದ್ರೋಹ ಬಗೀತಾರೆ. ಪುಂಡಾಟಿಕೆ ಮಾಡಿದ್ರೆ ನಮ್ಮವರು ಸುಮ್ಮನಿರ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರನ್ನ ಪೊಲೀಸರು ಎರಡು ಲಗಾಯಿಸಬೇಕೆಂದ ಹೊರಟ್ಟಿ ಅವರು, ಕಪ್ಪು ಮಸೀ ಬಳಿಯೋರು, ಕಲ್ಲು ಹೊಡೆಯೋರನ್ನ ಒದ್ದು ಒಳಗೆ ಹಾಕಬೇಕು ಇಂತಹವರ ಮೇಲೆ ಸರ್ಕಾರ ಬಹಳ ಕಠಿಣ ಕ್ರಮ ತಗೆದುಕೊಳ್ಳಬೇಕು, ಕನ್ನಡಿಗರಿಗೆ ಮೇಲೆ ದೌರ್ಜನ್ಯ ಮಾಡುವವರನ್ನ ಇರಿಸಿಕೊಳ್ಳಬಾರದು ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ದ್ರೋಹ ಮಾಡೋರು ಬೇಡ ಬೇಕಾದರೆ ಅವರು ಮಹಾರಾಷ್ಟ್ರಕ್ಕೆ ಹೋಗಲಿ. ಬೆಳಗಾವಿಯಲ್ಲಿರೋ ಎಂಇಎಸ್ ನವರು ಸತ್ರೂ ಮಹಾರಾಷ್ಟ್ರಕ್ಕೆ ಹೋಗಲ್ಲಆದರೆ ಒಂದು ವೇಳೆಕರ್ನಾಟಕಕ್ಕೆ ಬರೋರು ಕರ್ನಾಟಕಕ್ಕೆ ಬರಲಿ ಮಹಾರಾಷ್ಟ್ರಕ್ಕೆ ಹೊಗೋರು ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಆಯ್ಕೆ ಕೊಡಲಿ ಎಂದರು.
#ಜತ್ತ, ಕಾಸರಗೋಡು ಕರ್ನಾಟಕಕ್ಕೆ ಸೇರುತ್ತೆ:
ಗಡಿನಾಡಿನ ಊರುಗಳಾದ ಜತ್ತ ಹಾಗೂ ಕಾಸರಗೋಡು ಕರ್ನಾಟಕದಲ್ಲಿ ಇದ್ದು ನಮಗೆ ಸೇರ್ಪಡೆ ಆಗಲಿ ಎಂದ ಅವರು, ಬೆಳಗಾವಿಯಲ್ಲಿರೋ ಎಂಇಎಸ್ ಮಾಹಾರಾಷ್ಟ್ರಕ್ಕೆ ಹೋದ್ರೆ ನಾನು ರಾಜೀನಾಮೆ ಕೊಡ್ತೀನಿ ಎಂದ ಬಸವರಾಜ ಹೊರಟ್ಟಿ ಬೆಳಗಾವಿಯಲ್ಲಿ ಗಟ್ಟಿಯಾದ ಹೋರಾಟ ಆಗ್ತಿಲ್ಲ ಎಂದರು.
ನಮ್ಮ ಸರ್ಕಾರದ್ದೇ ತಪ್ಪು:
ಗಡಿ ವಿಷಯ ಬಂದಾಗ ಸರ್ಕಾರ ಗಟ್ಟಿ ಕ್ರಮ ತಗೆದುಕೊಳ್ಳಬೇಕು ಎಂದು ಬಸವರಾಜ ಹೊರಟ್ಟಿ ಇದು ಬಗೆಹರಿಯದ ವಿವಾಧ ಎಂದ ಅವರು, ಚುನಾವಣೆ ಬಂದಾಗ ಇಂತಹ ಒಂದು ವಿವಾಧ ಮಾಡ್ತಾರೆ ಎಂದ ಬಸವರಾಜ ಹೊರಟ್ಟಿ ಅವರು ಇದು ಶಾಸನ ಸಭೆಯಲ್ಲಿ ಚರ್ಚೆಯಾಗಿರೋ ವಿಷಯ ಆದ್ದರಿಂದ ಮಹಾರಾಷ್ಟ್ರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಹಾಜನ್ ವರದಿ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದ ಬಸವರಾಜ್ ಹೊರಟ್ಟಿ ಅವರು ಜತ್ತ ತಾಲೂಕು, ಕಾಸರಗೋಡು ನಮಗೆ ಬರಬೇಕು ಎಂದರು. ಮಹಾರಾಷ್ಟ್ರದವರು ಮಾಡೋದು ಮೂರ್ಖತನದ ಕೆಲಸ, ಇನ್ನು ಬೆಳಗಾವಿಯಲ್ಲಿರೋ ತಮ್ಮದೇ ಶಾಸಕರು ಸಂಸದರು ಇದ್ದಾರೆ, ಬೆಳಗಾವಿ ಕರ್ನಾಟಕ ಬಿಟ್ಟು ಹೋಗೋದು ಸಾಧ್ಯ ಇಲ್ಲ ಎಂದರು.
ಸದನದಲ್ಲಿ ಸಮಗ್ರ ಚರ್ಚೆ:
ಬೆಳೆಗಾವಿಯಲ್ಲಿ ಸದನದ ಮೊದಲ ದಿನವೇ ಇದರ ಕುರಿತು ಚರ್ಚೆ ಆರಂಭ ಆಗುತ್ತೆ. ಈ ಕುರಿತು ಸುದೀರ್ಘವಾದ ಚರ್ಚೆ ನಡೆಸಲಾಗುತ್ತದೆ ಎಂದರು.
ಸಿದ್ದು ವರುಣಾದಿಂದಲೇ ಸ್ಪರ್ಧಿಸುತ್ತಾರೆ
ಸಿದ್ದರಾಮಯ್ಯಾನವರು ನನಗೆ ಬಹಳ ಚೆನ್ನಾಗಿ ಗೊತ್ತು. ಸಿದ್ದರಾಮಯ್ಯ ನೂರಕ್ಕೆ 99 ರಷ್ಟು ವರುಣಾ ಕ್ಷೇತ್ರದಿಂದನೇ ನಿಲ್ತಾರೆ. ಬಹಳ ಪಾಪ್ಯುಲರ್ ಆದ್ರೆ ಹೀಗೆ ಆಗತ್ತೆ. ಸಿದ್ದರಾಮಯ್ಯ ಬಾದಾಮಿಗೆ ಜಾತಿ ಮೇಲೆ ಬಂದು ನಿಂತ್ರು ನಂತರ ಏನಾಯಿತು, ಈಗ ನಾನು ಹೇಳಿದ್ದೆ ಸೋಲು ಗೆಲವು ಮುಖ್ಯ ಅಲ್ಲ ಒಂದು ಕ್ಷೇತ್ರ ಆಯ್ಕೆ ಮಾಡಿಕೊಬೇಕು, ಹೀಗಾಗಿ ಅವರು ವರುಣಾಗೆ ನಿಲ್ತಾರೆ ಎಂದರು.
#BasavarajHoratti, #BorderDispute, #MES, #Maharashtra,