ಬೆಂಗಳೂರು,ಆ.24- ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕೆಂಪಣ್ಣ ಅವರು ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಕುರಿತು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಬೇಕು. 3ನೇ ವ್ಯಕ್ತಿ ಜೊತೆ ಮಾತುಕತೆ ನಡೆಸಿ ಆರೋಪ ಮಾಡಿದರೆ ಅದನ್ನುನಂಬಬೇಕೆ ಎಂದು ಪ್ರಶ್ನಿಸಿದರು.
ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬಂದ ನಂತರ ಆರೋಪ ಮಾಡುತ್ತಿದ್ದಾರೆ. ಇದನ್ನು ಪ್ರಮುಖವಾಗಿ ಗಮನಿಸಬೇಕು ಎಂದರು. ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲದ ಕ್ರಮ ಕೈಗೊಂಡಿದ್ದೇವೆ.
ನಿವೃತ್ತ ನ್ಯಾಯಾೀಧಿಶರ ನೇತೃತ್ವದಲ್ಲಿ ಟೆಂಡರ್ ಪರಿಶೀಲನಾ ಸಮಿತಿಯನ್ನು ಮಾಡಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಲೋಕಾಯುಕ್ತಕ್ಕೆ ಬೇಕಾದರೆ ದೂರು ನೀಡಲಿ