ವಾಹನ ಕಳ್ಳರ ಬಂಧನ : 4.30 ಲಕ್ಷ ಮೌಲ್ಯದ ವಾಹನಗಳ ವಶ

Social Share

ಬೆಂಗಳೂರು, ಮಾ.5- ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಬ್ಯಾಟರಾಯನ ಪೊಲೀಸರು 4.30 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆಜೆಆರ್ ನಗರದ ಗೋರಿಪಾಳ್ಯ, ಸಂಗಮ್ ವೃತ್ತದ ಬಳಿಯ ನಿವಾಸಿ ಮಜೀದ್ ಪಾಷಾ(21) ಬಂಧಿತ ಆರೋಪಿ.
ಈತನ ಬಂಧನದಿಂದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ದ್ವಿಚಕ್ರ ವಾಹನಗಳು ಪತ್ತೆಯಾಗಿದೆ. ಇದಲ್ಲದೆ ಶಿವಾಜಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಕೂಡ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಲ್ಲಿ ಭಾರತದ ಘನತೆಗೆ ಧಕ್ಕೆ ತಂದಿದ್ದು ಪ್ರಧಾನಿ ಮೋದಿ : ರಾಹುಲ್

ಈ ಹಿಂದೆ ಆರೋಪಿ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಡಿಸಿಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪವಿಭಾಗ ಎಸಿಪಿ ಭರತ್, ಎಸ್. ರೆಡ್ಡಿ ನೇತೃತ್ವದಲ್ಲಿ ಬ್ಯಾಟರಾಯನಪುರ ಇನ್ಸ್‍ಪೆಕ್ಟರ್ ನಿಂಗನಗೌಡ, ಸಬ್‍ಇನ್ಸ್‍ಪೆಕ್ಟರ್ ವೀರಭದ್ರಪ್ಪ ಮತ್ತು ಅವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Batarayanpur, police, Two accused, arrested,

Articles You Might Like

Share This Article