ಲಂಚ ಪ್ರಕರಣದಲ್ಲಿ ಪಂಜಾಬ್ AAP ಶಾಸಕ ಅಮಿತ್ ರತ್ತನ್ ಅರೆಸ್ಟ್

Social Share

ಚಂಡೀಗಢ, ಫೆ .23 -ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‍ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್‍ಫಟ್ಟಾ ಅವರನ್ನು ವಿಜಿಲೆನ್ಸ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಈಗಾಗಲೆ ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಕಳೆದ ರಾತ್ರಿ ಅಮಿತ್ ರತ್ತನ್ ಅವರನ್ನು ಬಂಧನವಾಗಿದೆ.ಎಂದು ಉನ್ನತ ಅಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪೆಡೆಯಲಾಗುವುದು ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕನ ಬಂಧನ ಸರ್ಕಾಕ್ಕೆ ಮುಜುಗರ ತಂದಿದೆ.

ಐಪಿಎಸ್ – ಐಎಎಸ್ ಬೀದಿ ಸಂಘರ್ಷ ವಿರುದ್ಧ ಕಠಿಣ ಕ್ರಮ : ಸಚಿವ ಅಶ್ವಥ್ ನಾರಾಯಣ್

ಗ್ರಾಮ ಪಂಚಾಯಿಗೆ 25 ಲಕ್ಷ ರೂಪಾಯಿ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ 5 ಲಕ್ಷ ಲಂಚ ಕೇಳಿದ್ದರು.ಇದನ್ನು ವಿರೋಧಿಸಿ ಕಳೆದ ಫೆ. 16 ರಂದು ಬಟಿಂಡಾದ ಘುಡಾ ಗ್ರಾಮದ ಮುಖ್ಯಸ್ಥ ಜಿಲೆನ್ಸ್ ಬ್ಯೂರೋಗೆ ದೂರು ನೀಡಿದ್ದರು.

ನನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಟ :ಮತ್ತೆ ಗುಡುಗಿದ ರೂಪಾ..

ಬಟಿಂಡಾದಲ್ಲಿ ವಿಜಿಲೆನ್ಸ್ ಬ್ಯೂರೋದ ತಂಡದಿಂದ ಬಲೆ ಬೀಸಿ ಶಾಸಕರ ಅಪ್ತ ಸಹಾಯಕ ರಶೀಮ್ ಗರ್ಗ್ 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ನಗದು ಜೊತೆ ಗಾರ್ಗ್ ಸಿಕ್ಕಿಬಿದ್ದಿದ್ದಾರೆ. ಘಟನೆ ನಂತರ ಶಾಸಕ ಗಾರ್ಗ್ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ಆರೋಪ ನಿರಾಕರಿಸಿದ್ದರು. ಆದರೆ ಇಂದು ಶಾಸಕರ ಬಂಧನವಾಗಿದೆ.

Bathinda, MLA, Amit Rattan, arrested, bribery case,

Articles You Might Like

Share This Article