ಬ್ಯಾಟರಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾನೂನು

Social Share

ಬೆಳಗಾವಿ,ಡಿ.26- ಬ್ಯಾಟರಿ ತ್ಯಾಜ್ಯ ವಿಲೇವಾರಿಯು ಮುಂಬರುವ ದಿನಗಳಲ್ಲಿ ಸಮಸ್ಯೆ ಆಗುವುದನ್ನು ಮನಗಂಡು ಪ್ರತ್ಯೇಕ ಕಾನೂನು ತಂದು ಪರಿಹಾರ ನೋಡಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಜೀವ ಪರಿಸ್ಥಿತಿ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ವಿಧಾನಪರಿಷತ್ತಿಗಿಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೊಸ ಕೈಗಾರಿಕಾ ನೀತಿ 2020-25ರ ಅನ್ವಯ ಇಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆ ಯಂತ್ರೋಪಕರಣಗಳನ್ನು ಅಳವಡಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.

8.92 ಕೋಟಿ ಮೌಲ್ಯದ 12 ಕಾರುಗಳ ವಶ : ಇಬ್ಬರು ಬಂಧನ

ರಾಜ್ಯದಲ್ಲಿ ಇದುವರೆಗೂ 180 ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳು ಮಂಡಳಿಯಿಂದ ಸ್ಥಾಪನಾ ಸಮ್ಮತಿ ಪತ್ರಗಳನ್ನು ಪಡೆದಿವೆ ಎಂದು ಹೇಳಿದರು.

ರೆಡ್ಡಿ ಪಕ್ಷ ಬಿಜೆಪಿಗೆ ಸಂಕಷ್ಟವೇ..? ಕಾಂಗ್ರೆಸ್, ಜೆಡಿಎಸ್ ವೇಗಕ್ಕೆ ಕಡಿವಾಣವೇ.?

ಪೌರಾಡಳಿತ ನಿರ್ದೇಶನಾಲಯ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿರುವ ಮಾಹಿತಿ ಪ್ರಕಾರ 2020-21ರಲ್ಲಿ 4046025ಟಿಪಿಎ ಆಗಿದೆ. ಇ-ತ್ಯಾಜ್ಯವು 96.175 ಟಿಪಿಎ ಆಗಿದೆ ಎಂದು ತಿಳಿಸಿದರು.

battery waste, disposal, Separate law, Minister, Anand Singh,

Articles You Might Like

Share This Article