ವಿವಿಗಳಲ್ಲಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನ, ಹೆಚ್ಚಿದ ಸಂಘರ್ಷ

Social Share

ನವದೆಹಲಿ, ಜ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರದರ್ಶಿಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ರಾತ್ರಿ ನವದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲ ವಿದ್ಯಾರ್ಥಿಗಳು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆದಿದೆ.

ಇದರಿಂದ ಕೆಲಕಾಲ ವಿವಿ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕೇರಳದ ವಿವಿಯೊಂದರಲ್ಲಿ ಪ್ರದರ್ಶನದ ವೇಳೆ ಕೆಲ ವಿದ್ಯಾರ್ಥಿಗಳ ನಡುವೆ ಸಂಘರ್ಷವಾಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಎ.ಕೆ.ಆಂಟನಿ ಪುತ್ರ ಗುಡ್‍ಬೈ

ಕೇಂದ್ರ ಸರ್ಕಾರ ದೇಶಾದ್ಯಂತ ಈ ವಿವಾದಿತ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದರೂ ಕೆಲವೆಡೆ ಎಡಪಂಥೀಯ
ವಿದ್ಯಾರ್ಥಿ ಸಂಘಟನೆಗಳು ಲ್ಯಾಪ್‍ಟಾಪ್‍ಗಳ ಮೂಲಕ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಪ್ರದರ್ಶಿಸಿವೆ.

ಹೈದರಾಬಾದ್ ಕ್ಯಾಂಪಸ್‍ನಲ್ಲೂ ಕಳೆದ ರಾತ್ರಿ ಬಿತ್ತಿಪತ್ರಗಳನ್ನು ಹಂಚಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ವೇಳೆ ಗುಂಪೊಂದು ಅವರ ಮೇಲೆ ಕಲ್ಲುತೂರಾಟ ನಡೆಸಿದ ವರದಿಯಾಗಿದೆ.

ಎಚ್ಚೆತ್ತಿರುವ ಕೇಂದ್ರ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ನಿಲ್ಲಿಸಬೇಕು ಎಂದು ಮನವಿ ಮಾಡಿದ ಕಾರಣ ಯು ಟ್ಯೂಬ್ ಹಾಗೂ ಟ್ವಿಟ್ಟರ್‍ಗಳಲ್ಲಿ ಇದನ್ನು ನಿರ್ಬಂಧಿಸಲಾಗಿದೆ. ಆದರೆ, ಕೆಲವರು ಡಾರ್ಕ್ ವೆಬ್‍ಸೈಟ್‍ಗಳಲ್ಲಿ ಇದನ್ನು ಡೌನ್‍ಲೋಡ್ ಮಾಡಿಕೊಂಡು ಪ್ರದರ್ಶಿಸುತ್ತಿರುವುದು ದೇಶದ ಹಲವೆಡೆ ಅಶಾಂತಿ ಸೃಷ್ಟಿಯಾಗಲು ಎಡೆಮಾಡಿಕೊಟ್ಟಿದೆ.

ಇನ್ಮುಂದೆ ವಿಮಾನದಲ್ಲಿ ಕೇಳಿದಷ್ಟು ಮದ್ಯ ಸಿಗಲ್ಲ

ಇದೇ ರೀತಿ ರಾಜಸ್ಥಾನ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ನಾಯಕರು ಇದರ ವಿರುದ್ಧ ಕಿಡಿಕಾರಿದ್ದರೆ, ವಿರೋಧ ಪಕ್ಷದ ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಎಂ ಸೇರಿದಂತೆ ಹಲವು ನಾಯಕರು ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ.

ಒಟ್ಟಾರೆ ಬಿಬಿಸಿ ಸಿದ್ಧಪಡಿಸಿದ್ದ ವಿವಾದಾತ್ಮಕ ಸಾಕ್ಷ್ಯಚಿತ್ರ ಈಗ ದೇಶದ ವಿವಿಧ ವಿಶ್ವವಿದ್ಯಾನಿಲಯದ ಅಂಗಳಕ್ಕೂ ತಲುಪಿದ್ದು ಭಾರೀ ಸಂಚಲನ ಸೃಷ್ಟಿಸಿದೆ.

BBC, Modi, documentary, screened, Hyderabad, Kerala, universities,

Articles You Might Like

Share This Article