ನವದೆಹಲಿ,ಫೆ.15- ಮುಂಬೈ ಮತ್ತು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳ ಮೇಲಿನ ದಾಳಿ ರಾತ್ರಿಯಿಡಿ ಮುಂದುವರೆದಿದೆ.ಭಾರತೀಯ ತೆರಿಗೆ ಅಧಿಕಾರಿಗಳು ರಾತ್ರಿಯಿಡಿ ಬಿಬಿಸಿ ಕಚೇರಿಗಳಲ್ಲಿ ಶೋಧ ಮುಂದುವರೆಸಿದ್ದರಿಂದ ಬಿಬಿಸಿ ಪ್ರಸಾರ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಈಮೇಲ್ ರವಾನಿಸಲಾಗಿದೆ.
ತೆರಿಗೆ ಅಕಾರಿಗಳು ವೈಯಕ್ತಿಕ ಆದಾಯದ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ದೂರವಿರಬಹುದು. ಆದರೆ, ಇತರ ವೇತನ ಸಂಬಂತ ಪ್ರಶ್ನೆಗಳಿಗೆ ಉತ್ತರಿಸಬೇಕು ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಲು ತನ್ನ ಸಿಬ್ಬಂದಿಗೆ ಸಲಹೆ ನೀಡಲಾಗಿದೆ.ಬಿಬಿಸಿ ಕಚೇರಿಗಳ ಮೇಲೆ ಭಾರತೀಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಕುರಿತಂತೆ ಬ್ರಿಟನ್ ಸರ್ಕಾರ ಯಾವುದೆ ಹೇಳಿಕೆ ನೀಡದೆ ಮೌನವಹಿಸಿದೆ.
ನಿನ್ನೆಯಿಂದ ಸತತವಾಗಿ ಶೋಧ ಕಾರ್ಯ ನಡೆಸುತ್ತಿರುವ ತೆರಿಗೆ ಇಲಾಖೆ ಅಕಾರಿಗಳು ಇಂದು ಬಿಬಿಸಿಯ ಹಿರಿಯ ಅಕಾರಿಗಳನ್ನು ಪ್ರಶ್ನಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಅನೇಕ ನಿವೃತ್ತ ಅಧಿಕಾರಿಗಳು
ಅನಧಿಕೃತ ತೆರಿಗೆ ಪ್ರಯೋಜನಗಳು, ತೆರಿಗೆ ವಂಚನೆ, ಲಾಭದ ಗಮನಾರ್ಹ ತಿರುವು ಮತ್ತು ಬಿಬಿಸಿಯ ನಿಯಮಗಳ ಅನುಸರಣೆಯ ಆರೋಪಗಳ ಬಗ್ಗೆ ತೆರಿಗೆ ಅಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ವಾರಂಟ್ ಇಲ್ಲದೆ ನಮ್ಮನ್ನು ಪ್ರಶ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಕೆಲವು ಸಿಬ್ಬಂದಿಗಳು ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
2002 ರಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‍ನಲ್ಲಿ ಸಂಭವಿಸಿದ ಗಲಭೆಗಳ ಕುರಿತು ಪ್ರಧಾನಿ ಮೋದಿ ಅವರನ್ನು ಟೀಕಿಸುವ ಎರಡು ಭಾಗಗಳ ಸರಣಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಸರ್ಕಾರ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
#BBCIndia, #offices, #searched, #incometax, #officials,