ಮುಂದುವರೆದ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶನ

Social Share

ನವದೆಹಲಿ,ಜ.27- ಜವಾಹರಲಾಲ್ ನೆಹರು ವಿವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸರಣಿ ಪ್ರದರ್ಶನ ತಡೆಯಲು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಘಟನೆ ನಂತರವೂ ದೆಹಲಿಯ ಮತ್ತೆರಡು ವಿವಿಗಳಲ್ಲಿ ಬಿಬಿಸಿ ಸರಣಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ.

ರಾಜಧಾನಿಯ ಉತ್ತರ ಭಾಗದಲ್ಲಿರುವ ದೆಹಲಿ ವಿವಿ ಹಾಗೂ ಆಂಬೇಡ್ಕರ್ ವಿವಿಗಳ ಕ್ಯಾಂಪಸ್‍ಗಳಲ್ಲಿ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶಿಸಲಾಗುವುದು ಎಂದು ವಿವಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಬಿಬಿಸಿ ಸರಣಿ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಒಂದು ವೇಳೆ ವಿದ್ಯಾರ್ಥಿಗಳು ಹಠ ಹಿಡಿದರೆ ಕ್ರಮ ಕೈಗೊಳ್ಳಲಾಗುವುದು ಅದಕ್ಕೂ ಮುನ್ನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರದರ್ಶನ ರದ್ದುಪಡಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಉಸ್ತುವಾರಿ ಬದಲಾಯಿಸಿದ್ದೇಕೆ? ಬಿಜೆಪಿಯಲ್ಲೇ ಗಂಭೀರ ಚರ್ಚೆ

ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿಗಳಲ್ಲಿ ಬಿಬಿಸಿ ಸರಣಿ ಪ್ರದರ್ಶನವನ್ನು ವಿಫಲಗೊಳಿಸಲಾಗಿದೆ ಎಂದು ಉಪಕುಲಪತಿ ನಜ್ಮಾ ಆಖ್ತರ್ ಹೇಳಿದ ನಂತರವೂ ಕೆಲವು ವಿದ್ಯಾರ್ಥಿಗಳು ಬಲವಂತವಾಗಿ ಸರಣಿ ಪ್ರದರ್ಶನಕ್ಕೆ ಮುಂದಾದ ಪರಿಣಾಮ ವಿವಿಗಳಿಗೆ ರಜೆ ನೀಡಲಾಗಿದೆ.

ಪಶ್ಚಿಮ ಬಂಗಾಳದ ಎಡ ವಿದ್ಯಾರ್ಥಿ ಸಂಘಟನೆಗಳು ಕೋಲ್ಕತ್ತಾದ ಕನಿಷ್ಠ ಎರಡು ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜಿಸಿವೆ.

ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‍ಎಫ್‍ಐ) ಗುರುವಾರ ಜಾದವ್‍ಪುರ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರ ಹಸ್ತಕ್ಷೇಪವಿಲ್ಲದೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ ಮತ್ತು ಇಂದು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ರಾಜ್ಯ ಸಂಘಟನೆಯ ಸಹಾಯಕ ಕಾರ್ಯದರ್ಶಿ ಸುಭಜಿತ್ ಸರ್ಕಾರ್ ತಿಳಿಸಿದ್ದಾರೆ.

ಹೆಂಡತಿ ಮೇಲಿನ ಕೋಪಕ್ಕೆ ಮಗನನ್ನು ಕೊಚ್ಚಿ ಕೊಂದ ಪಾಪಿ ಅಪ್ಪ

ಅದೇ ರೀತಿ ಮತ್ತೊಂದು ಎಡ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಡೆಂಟ್ಸ ಅಸೋಸಿಯೇಷನ್ (ಎಐಎಸ್‍ಎ) ಕೂಡ ಶುಕ್ರವಾರ ಜಾದವ್‍ಪುರ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಿದೆ.

BBC, Modi, Documentary, Screening, Plans, Universities,

Articles You Might Like

Share This Article