ಬಿಬಿಎಂಪಿ ಖಜಾನೆ ಖಾಲಿಯಾಯ್ತಾ..? ಸಾಲಕ್ಕಾಗಿ ಬ್ಯಾಂಕ್ ಮೊರೆ

Social Share

ಬೆಂಗಳೂರು, ಜ.12- ಸಾವಿರಾರು ಕೋಟಿ ಬಜೆಟ್ ಮಂಡಿಸುವ ಬಿಬಿಎಂಪಿ ಖಜಾನೆ ಖಾಲಿಯಾಯ್ತಾ… ಬ್ಯಾಂಕ್‍ನಿಂದ ಸಾಲ ಪಡೆಯಬೇಕು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪಾಲಿಕೆ ಖಜಾನೆಯಲ್ಲಿ ಹಣವಿಲ್ಲ, ಸುಮಾರು 700 ಕೋಟಿ ಸಾಲ ಪಡೆಯಬೇಕು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹತ್ತಾರು ಕಾಮಗಾರಿ ಮಾಡಿಸುವ ಪಾಲಿಕೆ ಗುತ್ತಿಗೆದಾರರಿಗೆ ಬಾಕಿ ನೀಡಲು ಹಣವಿಲ್ಲವೆ? ಬಾಕಿ ಬಿಡುಗಡೆಗೆ ಗುತ್ತಿಗೆದಾರರು ಈ ತಿಂಗಳು ಡೆಡ್‍ಲೈನ್ ಬೇರೆ ನೀಡಿದ್ದಾರೆ.

ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ದರೋಡೆ: ಮೂವರ ಬಂಧನ

ಅನಿವಾರ್ಯವಾಗಿ ಸಾಲದ ಮೊರೆ ಹೋಗಬೇಕಾಗಿದೆ. ಬ್ಯಾಂಕ್‍ನಿಂದ ಸಾಲ ಪಡೆಯಲು ಎಸ್ಕ್ರೋ ಅಕೌಂಟ್ ಓಪನ್ ಮಾಡಲಾಗಿದ್ದು, ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಅಗತ್ಯವಿರುವ ಸಾಲ ಪಡೆಯಲು ತೀರ್ಮಾನಿಸಿದೆ.
ಸರ್ಕಾರದಿಂದ ಹಸಿರು ನಿಶಾನೆ ದೊರೆತ ಕೂಡಲೇ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡಲಾಗುವುದು.

ಈಗಾಗಲೇ ಮೊದಲ ಹಂತದ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದೆ. ಪಾಲಿಕೆಯ ಸ್ಥಿತಿಗತಿ ಪರಿಶೀಲಿಸಿ ಸರ್ಕಾರ ಅನುಮತಿ ನೀಡಿದ ಕೂಡಲೇ ಬ್ಯಾಂಕ್‍ನ ಸಾಲಕ್ಕೆ ಮೊರೆ ಹೋಗಲಿದೆ.

BBMP, Approach, bank, loan,

Articles You Might Like

Share This Article