ತೆರಿಗೆ ವಂಚಿಸುವ ಮಾಲ್‍ಗಳಿಗೆ ಬಿಬಿಎಂಪಿ ಶಾಕ್..!

Social Share

ಬೆಂಗಳೂರು, ಡಿ.13- ತೆರಿಗೆ ವಂಚಿಸಿ ನೂರಾರು ಕೋಟಿ ಲಾಭ ಮಾಡುತ್ತಿರುವ ಮಾಲ್‍ಗಳಿಗೆ ಬಿಬಿಎಂಪಿ ಶಾಕ್ ನೀಡಿದೆ. ಕೋಟ್ಯಾಂತರ ರೂ. ತೆರಿಗೆ ಬಾಕಿ ಉಳಿಸಿ ಕೊಂಡ ನಗರದ ಪ್ರತಿಷ್ಠಿತ ಏಳು ಮಾಲ್‍ಗಳಿಗೆ ಪಾಲಿಕೆ ಬಿಸಿ ಮುಟ್ಟಿಸಿದ್ದು, ಇನ್ನುಮುಂಚೆ ಮಾಲ್‍ಗಳ ಮಾಲಿಕರ ಬ್ಯಾಂಕ್ ಖಾತೆಗೆ ತೆರಿಗೆ ಲಿಂಕ್ ಮಾಡಲಿದ್ದು, ಇದರಿಂದ ನೇರವಾಗಿ ತೆರಿಗೆ ಹಣ ವರ್ಗಾವಣೆಯಾಗುವ ಪ್ಲಾನ್ ರೂಪಿಸಿದೆ.

ತೆರಿಗೆ ಕಟ್ಟುವಂತೆ ಈಗಾಗಲೇ ಮಾಲ್‍ಗಳಿಗೆ ನೊಟೀಸ್ ತಮಟೆ ಬಾರಿಸಿ ಎಚ್ಚರ ಮುಟ್ಟಿಸಿದ್ದರು. ಕ್ಯಾರೆ ಎನ್ನದ ಮಾಲ್ ಮಾಲಿಕರಿಗೆ ಹೊಸ ಅಸ್ತ್ರ ರೂಪಿಸಲಾಗಿದೆ. ಮಾಲ್‍ಗಳಿಗೆ ಬೀಗ ಜಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ತೆರಿಗೆ ವಸೂಲಿಗೆ ಮಾಲ್‍ಗಳಿಗೆ ಬೀಗ ಹಾಕದೆ ವಸೂಲಿ ಮಾಡಿ ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಪಾಲಿಕೆ ನೂತನ ಪ್ಲಾನ್‍ನನ್ನು ಸಿದ್ದಪಡಿಸಿದೆ.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ

ಇನ್ನು ಮುಂದೆ ತೆರಿಗೆ ವಂಚಿಸಿದರೆ ಮಾಲಿಕರ ಅಕೌಂಟ್‍ನಿಂದ ನೇರ ತೆರಿಗೆ ವರ್ಗಾವಣೆಯಾಗುವ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತಿಸಲಾಗಿದ್ದು, ಈ ಬಗ್ಗೆ ಕಾನೂನು ತಜ್ಞರ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ತವಾಂಗ್ ಘರ್ಷಣೆ : ರಾಜ್‍ನಾಥ್‍ಸಿಂಗ್ ತುರ್ತು ಸಭೆ

ಬಾಕಿ ಉಳಿಸಿಕೊಂಡಿರುವ ಮಾಲ್‍ಗಳಿಗೆ ತೆರಿಗೆ ಕಟ್ಟಲು ಏಳು ದಿನ ಕಾಲಾವಕಾಶ ನೀಡಲಾಗಿದೆ.
ಬಾಕಿ ಉಳಿಸಿಕೊಂಡ ಮಾಲ್‍ಗಳು:
ಮಂತ್ರಿಮಾಲ್ 33 ಕೋಟಿ
ವಿಆರ್ ಮಾಲ್ 7 ಕೋಟಿ
ಸೆಂಟ್ರಲ್ ಮಾಲ್ 2.5 ಕೋಟಿ
ರಾಯಲ್ ಮೀನಾಕ್ಷಿ ಮಾಲ್ 2 ಕೋಟಿ
ಗರುಡ ಸ್ವಾಗತ್ ಮಾಲ್ 96 ಲಕ್ಷ
ಜಿಟಿ ವರ್ಡ್ ಮಾಲ್ 53 ಲಕ್ಷ
ಮೋರ್ 38 ಲಕ್ಷ
ವಿಗಿನಿಯ ಮಾಲ್ 12 ಕೋಟಿ
ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್ ಮಾಹಿತಿ ನೀಡಿದ್ದಾರೆ.

BBMP, Bangalore malls, tax, Bank account link,

Articles You Might Like

Share This Article