ಜನಪ್ರತಿನಿಗಳಿಲ್ಲದ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ತಯಾರಿ

Social Share

ಬೆಂಗಳೂರು,ಜ.31- ಜನಪ್ರತಿನಿಗಳಿಲ್ಲದ ಬಿಬಿಎಂಪಿ ಬಜೆಟ್ ಮಂಡನೆಗೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಲಿಕೆಗೆ ಹೊರೆಯಾಗದಂತೆ ವಾಸ್ತವಿಕ ಬಜೆಟ್ ಮಂಡನೆಗೆ ತಯಾರಿ ನಡೆಸಲಾಗಿದೆ. ಈ ಬಾರಿ ಬೆಂಗಳೂರಿಗೆ ಯಾವುದೇ ಹೊಸ ಯೋಜನೆ ಪ್ರಕಟಿಸದೆ ಹೊಸ ಕಾಮಗಾರಿ ಕೈಗೊಳ್ಳದೆ ಬಜೆಟ್ ಮಂಡನೆ ಮಾಡಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್ ಯೋಜನೆಗೂ ಹಣ ಮೀಡಲಿಡುವುದು ಅನುಮಾನವಾಗಿದೆ. ಕೇವಲ ಆಸ್ತಿ ತೆರಿಗೆಯನ್ನೆ ಬಿಬಿಎಂಪಿ ನಂಬಿಕೊಂಡಿರುವುದರಿಂದ ಈ ಭಾರಿ ಆದಾಯ ಕೊರತೆಯ ವಾಸ್ತವಿಕ ಬಜೆಟ್ ಮಂಡನೆ ಮಾಡಿ ಆರ್ಥಿಕ ಸಂಕಷ್ಟದಿಂದ ಕೊಂಚ ರಿಲೀಫ್ ಪಡೆಯುವುದು ಪಾಲಿಕೆ ಅಧಿಕಾರಿಗಳ ಐಡಿಯಾ ಆಗಿದೆ.
ಪಾಲಿಕೆಗೆ ಅಸ್ತಿ ತೆರಿಗೆಯಿಂದ 2670 ಕೋಟಿ ಹಾಗೂ ಇತರೆ ಮೂಲಗಳಿಂದ 1 ಸಾವಿರ ಕೋಟಿ ಅದಾಯ ಸೇರಿದಂತೆ ಒಟ್ಟು 3500 ಕೋಟಿ ಅದಾಯ ಬರ್ತಿದೆ. ಇದರ ಜೊತೆಗೆ ಸರ್ಕಾರ 3500 ಕೋಟಿ ರೂ.ಗಳ ಅನುದಾನ ನೀಡುವ ಸಾಧ್ಯತೆಗಳಿವೆ. ಹೀಗಾಗಿ ನಿರೀಕ್ಷಿತ ಆದಾಯವಾದ 7000 ಕೋಟಿ ರೂ.ಗಳಲ್ಲೆ ವಾಸ್ತವಿಕ ಬಜೆಟ್ ಮಂಡನೆ ಮಾಡಲು ಸಿದ್ದತೆ ನಡೆಸಲಾಗಿದೆ.
7 ಸಾವಿರ ಕೋಟಿ ರೂ.ಗಳಲ್ಲಿ ಸಿಬ್ಬಂದಿ ಸಂಬಳ.. ಕಛೇರಿಗಳ ವಿದ್ಯುತ್ ಬಿಲï.. ಪಾರ್ಕ್ ನಿರ್ವಹಣೆ. ಸೇರಿದಂತೆ ಇತರೆ ಖರ್ಚುಗಳು ಸೇರಿದಂತೆ ತಿಂಗಳಿಗೆ 300 ಕೋಟಿ ಖರ್ಚು ಆಗಲಿದೆ. ಇನ್ನು ಕಳೆದ ಹಲವಾರು ವರ್ಷಗಳಿಂದ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಸುಮಾರು 2 ಸಾವಿರ ಕೋಟಿ ಬಾಕಿ ನೀಡಬೇಕಿದೆ. ಕಳೆದ ಬಾರಿ 10295 ಕೋಟಿ ರೂ.ಗಳ ಬಜೆಟ್ ಗೆ ಸರ್ಕಾರ ಅನುಮೋದನೆ ನೀಡಿತ್ತು.
ಆದಾಯ ಹೆಚ್ಚಳಕ್ಕೆ ಪ್ಲಾನ್:
ಜನಪ್ರತಿನಿಗಳಿಲ್ಲದ ಹೊತ್ತಿನಲ್ಲಿ ಪಾಲಿಕೆ ಅಧಿಕಾರಿಗಳು ಆಧಾಯ ಹೆಚ್ಚಳಕ್ಕೆ ಹೊಸ ಪ್ಲಾನ್ ರೂಪಿಸುತ್ತಿದ್ದಾರೆ. ಆಸ್ತಿ ತೆರಿಗೆ ಬಿಟ್ಟರೆ ಅತಿ ಹೆಚ್ಚು ಹಣ ಸಂಗ್ರಹವಾಗುವ ಹೊಸ ಜಾಹಿರಾತು ನಿಯಮ ಜಾರಿಗೆ ಚಿಂತಿಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ನೋಂದಣಿ ಮಾಡಿಸಿ ನಿಗಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ಮೂಲಕ ಹಣ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ.
ಪಾಲಿಕೆ ವ್ಯಾಪ್ತಿಯ ಸುಮಾರು 500 ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತಿಂಗಳಿಗೆ ತಲಾ 10 ಸಾವಿರ ರೂ. ಶುಲ್ಕ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದು ಜನಪ್ರತಿನಿಗಳು ಆರಿಸಿ ಬರುವ ಸಾಧ್ಯತೆ ಇದೆ. ಜನಪ್ರತಿನಿಗಳು ಆಯ್ಕೆಯಾದರೆ ಅವರು ಪೂರಕ ಬಜೆಟ್ ಮಂಡನೆ ಮಾಡಿಕೊಳ್ಳುವುದು ಗ್ಯಾರಂಟಿ ಹೀಗಾಗಿ ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ ಮಾಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೂಚಿಸಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.

Articles You Might Like

Share This Article