ಬೆಂಗಳೂರು, ಜ.23- ಈ ಬಾರಿ ಯಾವುದೇ ಕಾರಣಕ್ಕೂ ರಾತ್ರೋ ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡುವುದಿಲ್ಲ. ಹಗಲು ವೇಳೆ, ಅದರಲ್ಲೂ ಸೂರ್ಯ ಕಾಣುವ ಸಮಯದಲ್ಲಿಯೇ 2023-24ನೇ ಸಾಲಿನ ಆಯವ್ಯಯ ಮಂಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯ ಕುರಿತು ಜನಾಭಿಪ್ರಾಯ ವರದಿ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ವಾರ್ಷಿಕ ಸಾಲಿನಲ್ಲಿ ರಾತ್ರಿ 11.30ಕ್ಕೆ ಪಾಲಿಕೆ ಆಯವ್ಯಯ ಸ್ವೀಕೃತಿ ಮತ್ತು ಪಾವತಿಯ ಪಟ್ಟಿಯನ್ನು ಪಾಲಿಕೆ ವೆಬ್ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಹೀಗೆ ಆಗಲ್ಲ. ಹಗಲಿನಲ್ಲಿ ಎಲ್ಲರೂ ನೋಡುವಂತೆ ಬಜೆಟ್ ಮಂಡನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ : ಸಿಎಂ ಬೊಮ್ಮಾಯಿ
ಇನ್ನೂ, ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್ಗೆ ಸಿದ್ಧತೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಫೆ.15ರ ನಂತರ ಸರ್ಕಾರಕ್ಕೆ ಬಜೆಟ್ ಮಂಡನೆಯ ಪ್ರಸ್ತಾವನೆ ಸಲ್ಲಿಸಲಾಗುವುದು.
ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಮಿಠಾಯಿ
ಶನಿವಾರದೊಳಗೆ 2022-23ನೇ ಸಾಲಿನ ಆಯವ್ಯಯದ ಖರ್ಚು ವೆಚ್ಚಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಎಲ್ಲ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನಂತರ ಬಜೆಟ್ ತಯಾರಿ ಸಭೆ ನಡೆಸಲಾಗುವುದು. ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬಳಿಕ ಬಿಬಿಎಂಪಿಯ ಬಜೆಟ್ ಮಂಡನೆಗೆ ಫೆ.15ರ ವೇಳೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
BBMP, budget, Chief Commissioner, Tushar Girinath,